ಕಾಂಗ್ರೇಸ್ ಕಾರ್ಯಕರ್ತನನ್ನು ಯಶ್ಪಾಲ್ ಮುಟ್ಟಿ ನೋಡಲಿ: ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಸವಾಲು

ಕಾಂಗ್ರೇಸ್ ಕಾರ್ಯಕರ್ತನನ್ನು ಯಶ್ಪಾಲ್ ಮುಟ್ಟಿ ನೋಡಲಿ: ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಸವಾಲು


ಪುತ್ತೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗಾಂಧಿಕುಟುಂಬದ ಕುಡಿ ರಾಹುಲ್ ಗಾಂಧಿ ಅವರ ವಂಶ ನಿರ್ಣಾಮ ಮಾಡೋದು ಬಿಡಿ. ಅವರ ವಿರುದ್ಧ ಹೇಳಿಕೆ ನೀಡುವವರು ರಾಹು ಗಾಂಧಿ ಕಾಲಡಿಯ ಧೂಳಿಗೆ ಸಮ. ತಾಕತ್ತಿದ್ದರೆ ಒಬ್ಬ ಕಾಂಗ್ರೇಸ್ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್ ಮಹಮ್ಮದ್ ಆಲಿ ಅವರು ಸವಾಲ್ ಹಾಕಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಹುಲ್ ಗಾಂಧಿ ವಂಶ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಂಶವಾಗಿದೆ. ಯಶ್ಪಾಲ್ ಸುವರ್ಣ ಈ ಹಿಂದೆ ಉಡುಪಿಯ ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ 300 ಜನರ ಹೆಸರಲ್ಲಿ ತಲಾ 2.50 ಲಕ್ಷದಂತೆ ಸಾಲ ಮಾಡಿ ಈ ಜನರಿಗೆ ಕೇವಲ 25-30 ಸಾವಿರ ಕೊಟ್ಟು ಉಳಿದ ಹಣವನ್ನು ವಂಚನೆ ಮಾಡಿದ ಆರೋಪಿ. ಇಂತಹ ವ್ಯಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಜನರೇ ನಿರ್ನಾಮ ಮಾಡುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್  ಇಂತಹ ಪೋಲಿಸಂಸ್ಕೃತಿ ಇರುವವರನ್ನೇ ಎಂಎಲ್‌ಎ, ಎಂಎಲ್‌ಸಿ, ಎಂಪಿಯನ್ನಾಗಿ ಮಾಡುತ್ತಿದೆ. ಸಿ.ಟಿ.ರವಿ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಹರೀಶ್ ಪೂಂಜಾ, ಭರತ್ ಶೆಟ್ಟಿ, ಸೂಲಿಬೆಲೆಯಂತಹ ಕೊಳಕು ಬಾಯಿ ಸಂಸ್ಕೃತಿಹೀನರು ಆರ್‌ಎಸ್‌ಎಸ್ ಪ್ರೊಡೆಕ್ಟ್‌ಗಳು. ಆದರೆ ಶಾಸಕರಾಗಿರುವ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್ ಅವರು ಯಾವತ್ತೂ ಇಂತಹ ಪದ ಬಳಕೆ ಮಾಡಿಲ್ಲ ಎಂದರು.

ಕೆಪಿಸಿಸಿ ಸೂಚನೆಯಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿಯೂ ಪ್ರಚಾರ ಸಮಿತಿಯಿಂದ ದೂರು ನೀಡಲಾಗುವುದು ಎಚ್ ಮಹಮ್ಮದ್ ಆಲಿ ತಿಳಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಅವರು ಮಾತನಾಡಿ, ರಾಮನ ಭಕ್ತರಾದವರು ರಾಮನ ಆದರ್ಶವನ್ನು ಪಾಲಿಸಬೇಕು. ಆದರೆ ಇಂತಹ ದ್ವೇಷ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಅನಾಗರಿಕ ಪ್ರವೃತ್ತಿಯನ್ನು ಯಶ್ಪಾಲ್ ಸುವರ್ಣ ಹೊಂದಿದ್ದಾರೆ. ಭಾರತ್ ಜೋಡೋ ಪರಿಕಲ್ಪಣೆಯ ಮೂಲಕ ದೇಶವನ್ನು ಒಂದುಗೂಡಿಸಿವ ರಾಹುಲ್ ಗಾಂಧಿ ವಿರುದ್ಧ ಹೇಳಿರುವ ಹೇಳಿಕೆ ಖಂಡನೀಯ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎನ್ ಚಂದ್ರಹಾಸ ಶೆಟ್ಟಿ, ಪುತ್ತೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ, ಕಡಬ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಯತೀಶ್ ಕುಮಾರ್ ಗೌಡ ಪಾನಡ್ಕ, ಉಪ್ಪಿನಂಗಡಿ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಗಣೇಶ್‌ರಾಜ್ ಬಿಳಿಯೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article