ಕುಕ್ಕೆಯಲ್ಲಿ ಧಾರಾಕಾರ ಮಳೆ ತುಂಬಿ ಹರಿದ ಕುಮಾರಧಾರ ನದಿ: ಸ್ನಾನ ಘಟ್ಟ ಮುಳುಗಡೆ

ಕುಕ್ಕೆಯಲ್ಲಿ ಧಾರಾಕಾರ ಮಳೆ ತುಂಬಿ ಹರಿದ ಕುಮಾರಧಾರ ನದಿ: ಸ್ನಾನ ಘಟ್ಟ ಮುಳುಗಡೆ


ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬರುತ್ತಿದ್ದು ಇಂದು ಶುಕ್ರವಾರ ಸಂಜೆ ಹೊತ್ತಿಗೆ ಸ್ನಾನಘಟ್ಟ ಮುಳುಗಿ ಪಕ್ಕದ ದೇವರ ಮಂಟಪದ ಕಟ್ಟೆ ವರೆಗೆ ನೀರು ಬಂದಿರುತ್ತದೆ. 


ಇಷ್ಟು ಪ್ರಮಾಣದ ನೀರು ಮಳೆಗಾಲದಲ್ಲಿ ಇದೆ ಮೊದಲ ಬಾರಿ ಬಂದಿದ್ದು ಯಾತ್ರಾರ್ತಿಗಳು ಭಕ್ತಾದಿಗಳು ನದಿಗೆ ಇಳಿಯದಂತೆ ಪೊಲೀಸ್ ಇಲಾಖೆ ಗೃಹರಕ್ಷಕ ದಳದವರು ಹಾಗೂ ಶ್ರೀ ದೇವಳದ ಸಿಬ್ಬಂದಿ ವರ್ಗ ಸೆಕ್ಯೂರಿಟಿ ವಿಭಾಗದವರು ಸೂಕ್ತ ಬಂದೋಬಸ್ತ್ ಮಾಡಿರುತ್ತಾರೆ. 


ಭಕ್ತಾದಿಗಳು ತೀರ್ಥ ಸ್ನಾನ ಮಾಡಲು ಪಕ್ಕದಲ್ಲಿ ಡ್ರಮ್ ಗಳನ್ನು  ಇರಿಸಿ  ನದಿ ನೀರನ್ನೆ ತುಂಬಿಸಿರುತ್ತಾರೆ. ಇಂದಿನ ಧಾರಾಕಾರ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ನೀರಿನಿಂದ ಮುಳುಗಡೆಯಾದ ಬಗ್ಗೆ ವರದಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article