ಕುಂಬ್ರ ಒಕ್ಕೂಟದ ಅಧ್ಯಕ್ಷೆಯಾಗಿ ಬದ್ರುನ್ನೀಸಾ ಆಯ್ಕೆ

ಕುಂಬ್ರ ಒಕ್ಕೂಟದ ಅಧ್ಯಕ್ಷೆಯಾಗಿ ಬದ್ರುನ್ನೀಸಾ ಆಯ್ಕೆ


ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂಬ್ರ ಕಾರ್ಯಕ್ಷೇತ್ರದ ಒಕ್ಕೂಟದ ಸಭೆಯು ಲಲಿತಾ ಅವರ ಅಧ್ಯಕ್ಷತೆಯಲ್ಲಿ ಕುಂಬ್ರ ರೈತ ಸಭಾಭವನದಲ್ಲಿ ನಡೆಯಿತು.

ಮುಂದಿನ ಮೂರು ವರ್ಷದ ಅವಧಿಗೆ ಸಮಿತಿಗೆ ಅಧ್ಯಕ್ಷರಾಗಿ ಬದ್ರುನ್ನಿಸಾ ಪರ್ಪುಂಜ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಕಾಶ್‌ಕುಮಾರ್ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾ ಕೆ, ಜೊತೆ ಕಾರ್ಯದರ್ಶಿಯಾಗಿ ಫಾತಿಮತ್ ಹುಹ್‌ರಾ, ಕೋಶಾಧಿಕಾರಿ ಜಯಂತಿ ರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮೇಲ್ವಿಚಾರಕರಾದ ಹರೀಶ್, ಕುಂಬ್ರ ಜನಜಾಗೃತಿ ಸಮಿತಿ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಸ್ಪಂದನಾ ಬಳಗದ ಅಧ್ಯಕ್ಷ ಅಶೋಕ್ ತ್ಯಾಗರಾಜೆ, ಒಕ್ಕೂಟದ ಕಾರ್ಯದರ್ಶಿ ರಾಜೀವಿ ಕುಂಬ್ರ, ಸೇವಾಪ್ರತಿನಿಧಿಯಾದ ಶಶಿಕಲಾ ಪಿ ರೈ ಉಪಸ್ಥಿತರಿದ್ದರು.

ಸದಸ್ಯೆ ವಿನೋದಾ ಸ್ವಾಗತಿಸಿದರು. ಸುಮಿತ್ರಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article