ಜುಲೈ 29 ರಂದು ಸಾಗರದಲ್ಲಿ ದೈವಜ್ಞ ಶ್ರೀಗಳ ಚಾತುರ್ಮಾಸ್ಯ
Wednesday, July 29, 2026
ಸಾಗರ: ಶ್ರೀಕ್ಷೇತ್ರ ಕರ್ಕಿಯ ಜ್ಞಾನೇಶ್ವರಿ ಪೀಠಾಧೀಶ್ವರರಾದ ಪ.ಪೂ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಅವರು 41ನೇ ಚಾತುರ್ಮಾಸ್ಯವ್ರತಾಚಾರಣೆ ಹಾಗೂ ಪ.ಪೂ. ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರ ತೃತೀಯ ಚಾತುರ್ಮಾಸ್ಯ ವ್ರತಾಚಾರಣೆ ಕಾರ್ಯಕ್ರಮವು ಜುಲೈ 29 ರಿಂದ ಪ್ರಾರಂಭಗೊಂಡು ಸೆ.26 ರ ವರೆಗೆ ನಗರದ ಇಕ್ಕೇರಿ ರಸ್ತೆಯಲ್ಲಿರುವ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಚಾತುರ್ಮಾಸ್ಯ ವ್ರತೋತ್ಸವ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಶ್ರೀ ಗಳವರ ವ್ಯಾಸ ಪಂಚಕ ಪೂಜೆ ಮೂಲಕ ಚಾತುರ್ಮಾಸ್ಯಪೂಜೆ ಆರಂಭ ಮತ್ತು ಸಮಾಜದ ವತಿಯಿಂದ ಪಾದುಕ ಪೂಜೆ ಸಭಾ ಕಾರ್ಯಕ್ರಮ, ಶ್ರೀಗಳ ಆಶೀರ್ವಚನ, ತೀರ್ಥ-ಪ್ರಸಾದ, ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 12.30 ಕ್ಕೆ ಪಟ್ಟದ ದೇವರ ಮಹಾಪೂಜೆ ನಡೆಯಲಿದೆ.
ಸಂಜೆ 6ರಿಂದ ಭಜನೆ, ಸಹಸ್ರನಾಮ ಪಠಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7-30 ಗಂಟೆಗೆ ಶ್ರೀಗಳಿಂದ ಪಟ್ಟದ ದೇವರ ಪೂಜೆ, ಆಶೀರ್ವಚನ, ತೀರ್ಥ-ಪ್ರಸಾದ ನಡೆಯಲಿದೆ.
ಅನ್ನ ಸಂತರ್ಪಣೆ:
2 ತಿಂಗಳು ಕಾಲ ನಡೆಯಲಿರುವ ಈ ಚಾತುರ್ಮಾಸ್ಯ ವ್ರತಾಚಾರಣೆ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ ದೈವಜ್ಞ ಸಮಾಜ ಬಾಂಧವರು, ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಮಠದ ಆರಾಧ್ಯ ದೇವತೆ ಶ್ರೀ ಜ್ಞಾನೇಶ್ವರಿ ದೇವಿಯ ಹಾಗೂ ಪರಮಪೂಜ್ಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9480295179, 9844997826, 9964275035 ಸಂಪರ್ಕಿಸಬಹುದಾಗಿದೆ.