ಅಂಗನವಾಡಿ ಕೇಂದ್ರಕ್ಕೆ ಕೊಡುಗೆಗಳ ಹಸ್ತಾಂತರ
Saturday, July 4, 2026
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಇನ್ನರ್ವೇಲ್ ಕ್ಲಬ್ ನವರು ಜಂಟಿಯಾಗಿ ಬಳ್ಪ ಸಮೀಪದ ಎಣ್ಣೆ ಮಜಲ್ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಪೂರ್ತಿಯಾಗಿ ಬಣ್ಣ ಬೆಳೆಯುವುದು ಹಾಗೂ ಅಂಗನವಾಡಿ ಮಕ್ಕಳಿಗೆ ಕಲರಿಂಗ್ ಬುಕ್, ಕ್ರೇಯಾನ್ಸ್ ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಅಧ್ಯಕ್ಷ ರೋಹಿತ್ ಬಿ.ಬಿ. ಸಭಾಧ್ಯಕ್ಷತೆ ವಹಿಸಿದ್ದರು.
ಊರಿನ ಹಿರಿಯರಾದ ಎಣ್ಣೆಮಜಲ್ ಪಟೇಲ್ ಪುಟ್ಟಣ್ಣ ಗೌಡ, ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷ ಸೌಮ್ಯ ದಿನೇಶ್, ರೋಟರಿ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್ ಆರ್., ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಇನ್ನರ್ವೇಲ್ ನಿಕಟ ಪೂರ್ವ ಅಧ್ಯಕ್ಷ ವಿಮಲ ರಂಗಯ್ಯ, ರೋಟರಿ ಕ್ಲಬ್‌ನ ಪೂರ್ವ ಅಧ್ಯಕ್ಷರುಗಳಾದ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆ ಮಜ್ಜಲ್, ಸದಸ್ಯರಾದ ದಿನೇಶ್ ಎಣ್ಣೆಮಜಲ್, ಯೋಗಣ್ಣ, ಬಳ್ಪ ಗ್ರಾಮ ಪಂಚಾಯತ್ ಸದಸ್ಯ ಶಶಿಕಲಾ ಸೂಂತಾರು, ಅಂಗನವಾಡಿ ಶಿಕ್ಷಕಿ ಸಿಂಚನ, ಸಹಾಯಕಿ, ಮಕ್ಕಳ ಪೋಷಕರು, ಊರಿನವರು ಉಪಸ್ಥಿತರಿದ್ದರು.