ಕಡಿಮೆ ಮಟ್ಟದಲ್ಲಿ ನೀರಿರುವ ಕುಮಾರಧಾರ ಸ್ನಾನಘಟ್ಟ
Wednesday, July 15, 2026
ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕುಮಾರಧಾರ ನದಿಯು ಈ ವರ್ಷ ಮಳೆ ಇಲ್ಲದೆ ಅಲ್ಪ ಮಟ್ಟದಲ್ಲಿ ನೀರಿನ ಹರಿವಿರುತ್ತದೆ.
ಕಳೆದ ವರ್ಷ ಇದೇ ಸಮಯದಲ್ಲಿ ಕುಮಾರ ಸ್ನಾನ ಘಟ್ಟ ತುಂಬಿ ಹರಿಯುತ್ತಿತ್ತು. ಆದರೆ ಈ ವರ್ಷ ಮಳೆ ಇಲ್ಲದ ಕಾರಣ ಕಳೆದ ವಾರ ಒಂದೇ ಬಾರಿ ಸ್ನಾನಘಟ್ಟ ಮುಳುಗಡೆ ಆಗುವ ಮಟ್ಟಿಗೆ ನೀರು ಬಂದಿತ್ತು. ಅಲ್ಲಿಂದ ಭಕ್ತರಿಗೆ ತೀರ್ಥ ಸ್ನಾನ ಮಾಡಲು ಸ್ಥಾನಗಟ್ಟದಲ್ಲಿ ಅವಕಾಶ ನೀಡದೆ ಅಲ್ಲಿ ಹತ್ತಿರದ ಮಾರ್ಗದ ಬದಿ ಡ್ರಮ್‌ಗಳಲ್ಲಿ ನೀರು ತುಂಬಿಸಿ ಹಾಗೂ ಶವರ್ ಬಾತಿನೊಂದಿಗೆ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇಲ್ಲಿಯವರೆಗೂ ಅದು ಹಾಗೆ ನಡೆಯುತ್ತಾ ಬಂದಿದೆ ಆದರೆ ಸ್ನಾನಘಟ್ಟದಲ್ಲಿ ಏಪ್ರಿಲ್ ಮೇ ತಿಂಗಳಲ್ಲಿ ಯಾವ ರೀತಿ ಕಡಿಮೆ ಮಟ್ಟದಲ್ಲಿ ನೀರಿರುತ್ತದೆ ಅದೇ ರೀತಿ ಈಗ ಇದೆ. ಇದೀಗ ಮಳೆಯೂ ಇಲ್ಲ ಬಿಸಿಲಿನ ತಾಪ ಏರುತ್ತಿದೆ ಇದೆ ಭಕ್ತರ ಸಂಖ್ಯೆಯು ಕ್ಷೇತ್ರಕ್ಕೆ ಬರುವುದು ವಿರಳವಾಗಿದೆ.