ಕರ್ಣಾಟಕ ಬ್ಯಾಂಕ್‌ಗೆ ಹೊಸ ಕಾರ್ಯನಿರ್ವಾಹಕ ನಿರ್ದೇಶಕರು
Wednesday, July 15, 2026
ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಿಜಿ ಶ್ರೀಕೃಷ್ಣವಿಲಾಸ್ ಶಂಕರನಾರಾಯಣನ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರ ನೇಮಕಾತಿಯು ಜುಲೈ 15ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 31 ವರ್ಷಗಳ ಅನುಭವ ಹೊಂದಿರುವ ಬಿಜಿ ಎಸ್.ಎಸ್. ಅವರು ಕಾರ್ಪೊರೇಟ್ ಬ್ಯಾಂಕಿಂಗ್, ರೀಟೇಲ್ ಮತ್ತು ಶಾಖಾ ಬ್ಯಾಂಕಿಂಗ್, ಠೇವಣಿ ವ್ಯವಹಾರ, ಭದ್ರತಾ ಆಸ್ತಿ ನಿರ್ವಹಣೆ, ಡಿಜಿಟಲ್ ಆಧುನೀಕರಣ ಹಾಗೂ ಸಂಸ್ಥೆಯ ಪರಿವರ್ತನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.
ದೇಶವ್ಯಾಪಿ ಬ್ಯಾಂಕಿಂಗ್ ಜಾಲದ ಯಶಸ್ವಿ ನಿರ್ವಹಣೆ, ಕಾರ್ಪೊರೇಟ್ ಬ್ಯಾಂಕಿಂಗ್ ವಿಸ್ತರಣೆ, ಅಪಾಯ ನಿರ್ವಹಣಾ ವ್ಯವಸ್ಥೆ ಬಲಪಡಿಸುವುದು, ಆಸ್ತಿ ಗುಣಮಟ್ಟ ಸುಧಾರಣೆ, ಗ್ರಾಹಕರ ವಿಸ್ತರಣೆ ಹಾಗೂ ಡಿಜಿಟಲ್ ಪರಿವರ್ತನೆಗೆ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ.
ಬಿಜಿ ಎಸ್.ಎಸ್. ಅವರ ಅನುಭವ ಮತ್ತು ನಾಯಕತ್ವವು ಕರ್ಣಾಟಕ ಬ್ಯಾಂಕ್‌ನ ಮುಂದಿನ ಬೆಳವಣಿಗೆ ಹಾಗೂ ಯಶಸ್ಸಿಗೆ ಹೊಸ ದಿಕ್ಕು ನೀಡಲಿದೆ ಎಂದು ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ.