ಬಿಳಿನೆಲೆ-ಕೈಕಂಬ ಕಳಿಗೆ ತೋಟಕ್ಕೆ ಆನೆ ದಾಳಿ ಕೃಷಿ ನಾಶ

ಬಿಳಿನೆಲೆ-ಕೈಕಂಬ ಕಳಿಗೆ ತೋಟಕ್ಕೆ ಆನೆ ದಾಳಿ ಕೃಷಿ ನಾಶ


ಸುಬ್ರಹ್ಮಣ್ಯ: ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕಳಿಗೆ ಧರ್ಮಪ್ಪ ಗೌಡ, ಆನಂದ ಗೌಡ, ಹಾಗೂ ಚಿದಾನಂದ ಗೌಡ ಎಂಬವರ ಕೃಷಿ ತೋಟಕ್ಕೆ ಶುಕ್ರವಾರ ರಾತ್ರಿ ಮೂರು ಆನೆಗಳು ಬಂದು ಫಲವತ್ತಾದ ತೆಂಗಿನ ಮರಗಳು, ಅಡಿಕೆ ಮರಗಳು ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿವೆ.

ರಾತ್ರಿಯೇ ಸುಬ್ರಹ್ಮಣ್ಯ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ ತಕ್ಷಣ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಕೊಂಬಾರು ಬೀಟಿನ ರಾತ್ರಿ ಪಹಳಿಯ ಗಾರ್ಡ್ ದಿನೇಶ್, ವಾಚಾರ್ ಕಾರ್ತಿಕ್, ಬಂದು ಮಧ್ಯರಾತ್ರಿ ಎರಡು ಗಂಟೆವರೆಗೆ ಅಲ್ಲೇ ಇದ್ದು ಸ್ಥಳೀಯರೊಂದಿಗೆ ಸೇರಿ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article