ಅಕ್ಕ ಪಡೆಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ

ಅಕ್ಕ ಪಡೆಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ


ಶಿರ್ವ: 160 ವರ್ಷಗಳ ಇತಿಹಾಸ ಹೊಂದಿರುವ ಉದ್ಯಾವರ ಹಿಂದೂ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳೊಂದಿಗೆ ಶನಿವಾರ ಉಡುಪಿ ಜಿಲ್ಲಾ ಅಕ್ಕ ಪಡೆಯ ಅಧಿಕಾರಿಗಳಾದ ರಕ್ಷಿತಾ ಮತ್ತು ವನಿತಾ ಅವರು ಸಂವಾದ ನಡೆಸಿ ಸಾಮಾಜಿಕ ಪಿಡುಗುಗಳಾದ ವಿದ್ಯಾರ್ಥಿಗಳ ಲೈಂಗಿಕ ಶೋಷಣೆ, ಶಾಲಾ ಹೊರಗುಳಿಯುವಿಕೆ, ಭಿಕ್ಷಾಟನೆ ಸಹಿತ  ಪೂರಕ ಮಾಹಿತಿಗಳನ್ನು ನೀಡಿದರು. 

ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆಗೆ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು. 

ಶಾಲಾ ಮುಖ್ಯ ಶಿಕ್ಷಕಿ ಅನುರಾಧಾ ಶೆಟ್ಟಿ, ವಿದ್ಯಾರ್ಥಿಗಳೊಂದಿಗೆ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article