ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ
Saturday, July 11, 2026
ಸುಬ್ರಹ್ಮಣ್ಯ: ಸುಬ್ರಹ್ಮಣ್ಯಕ್ಕೆ ಯಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಲಾಡ್ಜ್‌ನಲ್ಲಿ ತಂಗಿದ್ದು, ಅದೇ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಮನಗರ ಉಚ್ಚಮ್ಮನದೊಡ್ಡಿ ನಿವಾಸಿ ಮಧು ಎಸ್. (30) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಕಡಬದ ನಿವಾಸಿ ಜಗದೀಶ್ ಪಡ್ಪು ಎಂಬವರು ಸುಬ್ರಹ್ಮಣ್ಯ ಗ್ರಾಮದ ಅಜ್ಜಿಹಿತ್ಲು ಎಂಬಲ್ಲಿ ಲಾಡ್ಜ್‌ನ್ನು ಲೀಝ್ಸ್‌ಗೆ ಪಡೆಡು ನಡೆಸುತ್ತಿದ್ದು, ಜು.8ರಂದು ಮಧ್ಯಾಹ್ನ ಈ ಲಾಡ್ಜ್‌ಗೆ ಬಂದಿದ್ದು, ಜು.9 ರಂದು ಸಂಜೆಯಾದರೂ ಹೆರಗೆ ಬಾರದಿದ್ದಾಗ ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಸುಬಂದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.