ನಾಗ ಪ್ರತಿಷ್ಠ ಮಂಟಪದ ಶಿಲಾ ಕಲ್ಲುಗಳು, ಕುಮಾರಧಾರ ನದಿಯಲ್ಲಿ ಜಲ ಸ್ತಂಭನ

ನಾಗ ಪ್ರತಿಷ್ಠ ಮಂಟಪದ ಶಿಲಾ ಕಲ್ಲುಗಳು, ಕುಮಾರಧಾರ ನದಿಯಲ್ಲಿ ಜಲ ಸ್ತಂಭನ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗ ಪ್ರತಿಷ್ಠ ಮಂಟಪದಲ್ಲಿ ಶೇಖರಣೆಯಾದ ನಾಗ ಶಿಲಾ ಕಲ್ಲುಗಳನ್ನು ಶನಿವಾರ ಕುಮಾರಧಾರ ನದಿಯಲ್ಲಿ ಜಲ ಸ್ತಂಭಗೊಳಿಸಲಾಯಿತು.


ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕರು, ಸರ್ಪಸಂಸ್ಕಾರ ವಿಭಾಗದ ಅರ್ಚಕರು ಹಾಗೂ ಕ್ರಿಯಾಕರ್ತರು ನಾಗಪ್ರತಿಷ್ಟಾ ಶಿಲಾ ಕಲ್ಲುಗಳನ್ನು ಪ್ರತಿಷ್ಟಾ ಮಂಟಪದಿಂದ ತೆರವುಗೊಳಿಸಿ ಕುಮಾರಧಾರ ನದಿಗೆ ಕೊಂಡೊಯ್ಯಲು ಜುಲೈ 11 ರಂದು ಕರಸೇವೆಯಲ್ಲಿ ತೊಡಗಿರೂವರು.


ಸರ್ಪ ಸಂಸ್ಕಾರ ವಿಭಾಗದ ಉಸ್ತುವಾರಿ ಸುಧಾಕರ ಭಟ್ ಇಂಜಾಡಿ, ಅರ್ಚಕರಾದ ಸರ್ವೇಶ್ವರ ಕೇಕುಣ್ಣಾಯ ನೂಚಿಲ, ಶಂಕರ ನಾರಾಯಣ ಶಾಸ್ತ್ರಿ ನೂಚಿಲ, ನಂದ ಕಿಶೋರ ಭಟ್ ನೂಚಿಲ, ರಾಮಕೃಷ್ಣ ಭಟ್ ನೂಚಿಲ ಮತ್ತಿತರರ ಮಾರ್ಗದರ್ಶನದಲ್ಲಿ ಶಿಲಾ ಕಲ್ಲಿನ ತೆರವುಗೊಳಿಸುವ ಕರಸೇವೆ ನೆರವೇರಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article