ಎಸ್. ಜಾನಕಿ ನಿಧನಕ್ಕೆ ಹೆಗ್ಗಡೆ ಸಂತಾಪ

ಎಸ್. ಜಾನಕಿ ನಿಧನಕ್ಕೆ ಹೆಗ್ಗಡೆ ಸಂತಾಪ

ಉಜಿರೆ: ಗಾನಕೋಗಿಲೆ ಎಂದೇ ಚಿರಪರಿಚಿತರಾದ ಖ್ಯಾತ ಗಾಯಕಿ ಎಸ್. ಜಾನಕಿಯವರು ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು.

ನಾವೆಲ್ಲರೂ ಸಿನಿಮಾವನ್ನು ನೋಡುತ್ತಿರುವ ಸಂದರ್ಭದಲ್ಲಿ ಅವರು ಹಾಡಿರುವ ಅತೀ ಹೆಚ್ಚಿನ ಹಾಡುಗಳನ್ನು ಕೇಳಿ ಆನಂದಪಟ್ಟಿದ್ದೇವೆ. ಅತ್ಯುತ್ತಮ ಕಂಠದ ಗಾಯಕಿಯಾಗಿದ್ದು, ಎಲ್ಲಾ ವಯಸ್ಸಿನವರಿಗೂ ತಕ್ಕಂತೆ ಹಾಡುಗಳನ್ನು ಹಾಡುತ್ತಿರುವುದನ್ನು ನಾವೆಲ್ಲ ಕೇಳಿದ್ದೇವೆ. ಪ್ರತಿ ಬಾರಿಯೂ ರೆಡಿಯೋದಲ್ಲಿ ಚಿತ್ರಗೀತೆಯನ್ನು ಆಲಿಸುವ ಸಂದರ್ಭದಲ್ಲಿ ಈ ಹಾಡನ್ನು ಹಾಡಿದವರು ಎಸ್. ಜಾನಕಿ ಎಂದು ಪದೇ ಪದೇ ಕೇಳುತ್ತಿದ್ದೆವು. ದೇಶದಾದ್ಯಂತ ಹೆಚ್ಚಿನ ಎಲ್ಲಾ ಭಾಷೆಗಳಲ್ಲಿ ತನ್ನ ಹಾಡಿನ ಛಾಪನ್ನು ಮೂಡುಸಿರುತ್ತಾರೆ.

ಇವರ ಅಸ್ತಂಗತವು ಸಂಗೀತ ಲೋಕಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article