ಕರುವಿನ ಮೇಲೆ ಚಿರತೆ ದಾಳಿ
Sunday, July 19, 2026
ಉಜಿರೆ: ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಅಡೆಂಕಿರಿಮಜಲು ಸೇಸಪ್ಪ ಗೌಡರ ದನದ ಹಟ್ಟಿಯಲ್ಲಿ ಜು.19 ರಂದು ಮುಂಜಾನೆ ಸುಮಾರು 2.30 ಗಂಟೆಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.
ಕರುವಿನ ಕುತ್ತಿಗೆಗೆ ಚಿರತೆ ಕಚ್ಚಿದ್ದು ಗಾಯಗಳಾಗಿದೆ.
ಹಲವಾರು ದಿನಗಳಿಂದ ಕಾಡಂಡ, ಬೈಪಾಡಿ ಪ್ರದೇಶದಲ್ಲಿ ಚಿರತೆ ತಿರುಗಾಡುತಿದ್ದು, ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.