ಶ್ರೀಕ್ಷೇತ್ರ ಪೊಳಲಿಯಲ್ಲಿ 5 ಕೋ. ವೆಚ್ಚದ ನೂತನ ಅನ್ನಛತ್ರಕ್ಕೆ ಶಿಲಾನ್ಯಾಸ

ಶ್ರೀಕ್ಷೇತ್ರ ಪೊಳಲಿಯಲ್ಲಿ 5 ಕೋ. ವೆಚ್ಚದ ನೂತನ ಅನ್ನಛತ್ರಕ್ಕೆ ಶಿಲಾನ್ಯಾಸ


ಬಂಟ್ವಾಳ: ಇತಿಹಾಸ ಪ್ರಸಿದ್ದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸುಸಜ್ಜಿತವಾದ ನೂತನ ಅನ್ನಛತ್ರಕ್ಕೆ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಲಾಯಿತು.


ಶ್ರೀ ಕ್ಷೇತ್ರ ಪೊಳಲಿಯ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿಗಳ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅನಂತಪದ್ಮನಾಭ ಭಟ್, ಶ್ರೀಕಾಂತ್ ಮಯ್ಯ ಅವರು ಧಾರ್ಮಿಕ ವಿಧಿ ವಿದಾನಗಳನ್ನು ನೆರವೇರಿಸಿದರು.

ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರ ಮಾಧವ ಭಟ್, ಪೊಳಲಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ, ಮಾಜಿ ಸಚಿವ ಬಿ. ರಮಾನಾಥ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್, ದೇವಳದ ಇಂಜಿನಿಯರ್ ಲಕ್ಷ್ಮಣ್ ಪೂಜಾರಿ, ಮುಗರೋಡಿ ಕನ್ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಫರಂಗಿಪೇಟೆ, ಸ್ಥಳೀಯ ಪ್ರಮುಖರಾಸ ಕೃಷ್ಣರಾಜ್ ಮಾರ್ಲ, ವಿದ್ಯಾಚರಣ್ ಭಂಡಾರಿ, ಗಣೇಶ್ ಶೆಟ್ಟಿ ಪರಾರಿ, ಜೀವರಾಜ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಕುಮಾರ್ ಆಳ್ವ, ಸೋಮಶೇಖರ್ ಶೆಟ್ಟಿ, ದೇವ್ ದಾಸ್ ಹೆಗ್ಡೆ, ಚಂದ್ರಶೇಖರ್ ಭಂಡಾರಿ, ವೆಂಕಟೇಶ ನಾವಡ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ, ಭಾಸ್ಕರ್ ಭಟ್, ಸುಬ್ರಾಯ ಕಾರಂತ ಮತ್ತಿತರರಿದ್ದರು.

ಪೊಳಲಿಯಲ್ಲಿ ಭಕ್ತರ ದಂಡು:

ಆ.21 ರಂದು ವಿಶೇಷವಾಗಿ ಸೋಣ ಶುಕ್ರವಾರವಾದ ಹಿನ್ನಲೆಯಲ್ಲಿ ಪೊಳಲಿ ಕ್ಷೇತ್ರದಲ್ಲಿ ಭಕ್ತರ ದಂಡೆ ನೆರೆದಿತ್ತು. ಅದರಲ್ಲು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ದೇವರ ದರ್ಶನ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article