ನೀರುಪಾಲದ ವ್ಯಕ್ತಿಯ ಮೃತದೇಹ ಪತ್ತೆ
Monday, August 3, 2026
ಬಂಟ್ವಾಳ: ತಾಲೂಕಿನ ಕೊಯಿಲ ಸಮೀಪದ ಹೋರಂಗಳ ಬಳಿ ಶನಿವಾರ ರಾತ್ರಿ ಆಕಸ್ಮಿಕ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿದ್ದ ಜೀವನ್ ಪಿಂಟೋ (48) ಅವರ ಮೃತ ದೇಹ ಸೋಮವಾರ ಬೆಳಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಪತ್ತೆ ಹಚ್ಚಿ ಮೇಲಕ್ಕೆತಗತವಲ್ಲಿ ಎನ್‌ಡಿಆರ್‌ಎಫ್ ತಂಡ ಯಶಸ್ವಿಯಾಗಿದೆ.
ಶನಿವಾರ ರಾತ್ರಿ ತೋಡಿ ಇನ್ನೊಂದು ಬದಿಯಲ್ಲಿರುವ ತಮ್ಮ ಮಾವನ ಮನೆಗೆ ತೆರಳಲೆಂದು ಕಾಲು ಸಂಕದಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿತ್ತು. ವಿಪರೀತ ಮಳೆ ಸಹಿತ ತೋಡಿನಲ್ಲಿ ನೀರಿನ ಹರಿವಿನ ಮಧ್ಯೆಯು ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳೀಯ ಸಹಕಾರದಿಂದ ಹುಡುಕಾಟ ನಡೆಸಿದ್ದರು.
ಭಾನುವಾರ ಇಡೀ ದಿನ ಎನ್‌ಡಿಆರ್‌ಎಫ್ ತಂಡವು ಜೊತೆಗೂಡಿ ಶೋಧ ನಡೆಸಿತ್ತು. ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.