ಬಸ್ಸಿನಲ್ಲಿ ವೃದ್ಧನಿಂದ ಅಸಭ್ಯ ಬರ್ತನೆ

ಬಸ್ಸಿನಲ್ಲಿ ವೃದ್ಧನಿಂದ ಅಸಭ್ಯ ಬರ್ತನೆ

ಬಂಟ್ವಾಳ: ಬಿ.ಸಿ.ರೋಡ್‌ನಿಂದ ಮೆಲ್ಕಾರ್ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನೋರ್ವ ಸಾರ್ವಜನಿಕವಾಗಿ ಖಾಸಗಿ ಅಂಗಾಂಗವನ್ನು ಪ್ರದರ್ಶಿಸಿ ಅಸಭ್ಯ ವರ್ತನೆ ನಡೆಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಟ್‌ಬ್ಯಾಂಕ್‌ನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಮಧ್ಯಾಹ್ನ ಸುಮಾರು 2.10ಕ್ಕೆ ಬಿ.ಸಿ.ರೋಡ್ ಬಸ್ ನಿಲ್ದಾಣ ತಲುಪಿದೆ.

ಈ ವೇಳೆ ಸುಮಾರು 60ರಿಂದ 70 ವರ್ಷದೊಳಗಿನ ವೃದ್ದನೋರ್ವ ಬಸ್ ಹತ್ತಿ ಚಾಲಕರ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತು ಬಳಿಕ ಮೆಲ್ಕಾರ್ ಜಂಕ್ಷನ್‌ನಲ್ಲಿ ಇಳಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ

ಇದೇ ವೇಳೆ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಚಾಲಕರ ಬಳಿ ಬಂದು, ಈತನ ಅಸಭ್ಯ ವರ್ತನೆಯನ್ನು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವೃದ್ಧ ಮೆಲ್ಕಾರ್‌ನಲ್ಲಿ ಇಳಿದಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article