ಮಂಗಳೂರು ವಿವಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಬಳಿಕ ಮಂಗಳ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ವಾಯುಸೇನೆ ಅಧಿಕಾರಿ ಹಾಗೂ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇಶ ಹಿಂದೆಯೇ ಸಂಪತ್ಭರಿತ ದೇಶವಾಗಿತ್ತು. ಇದರಿಂದಾಗಿಯೆ ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಮೊದಲಾದವರು ಇಲ್ಲಿಗೆ ಬಂದು ನಮ್ಮ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುವುದರೊಂದಿಗೆ ಅವರೇ ಆಳುವಂತಾಯಿತು. ಆದರೂ ಭಾರತ ಇಂದಿಗೂ ಜಗತ್ತಿಗೆ 4 ನೇ ಆರ್ಥಿಕ ಶಕ್ತಿಯಾಗಿ ನಿಂತಿದೆ. ದೇಶ ಪ್ರೇಮದೊಂದಿಗೆ ನಾವೆಲ್ಲರೂ ಒಗ್ಗಟ್ಟಾಗಿ ದೇಶ ಕಟ್ಟೋಣ ಎಂದರು.
ಕುಲಸಚಿವ ಸಂತೋಷ್ ಬಿ. ಜಗಲಸಾರ, ಪರೀಕ್ಷಾಂಗ ಕುಲಸಚಿವರಾದ ಭಾರತವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ರೀತಿಯಲ್ಲಿ ಮುಂದುವರಿದಿದ್ದೇವೆ. ಆದರೆ ಪರಿಸರ ಅಸಮತೋಲನ ಸೇರಿದಂತೆ ಅನೇಕ ಸವಾಲುಗಳೂ ಮುಂದಿವೆ. ಇಂದಿನ ಯುವ ಜನತೆಯ ಜ್ಞಾನ, ಕೌಶಲ್ಯ, ಶ್ರಮ, ಪರಿಶ್ರಮ, ದೇಶ ಸೇವೆಯೇ ದೇಶದ ಮುಂದಿನ ದೇಶದ ನಿರ್ಧರಿಸುತ್ತದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ .ಪಿ.ಎಲ್. ಧರ್ಮ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ದೇವೇಂದ್ರಪ್ಪ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೆಶಕರಾದ ಡಾ. ಜೆರಾಲ್ಡ್ ಸಂತೋಷ್ ಅವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಣ ವಿಭಾಗದ ಡಾ.ರಮೇಶ್ ಅವರು ಸ್ವಾಗತಿಸಿದರು. ವಿವಿ ಶಿಕ್ಷಕೇತರರ ಉದ್ಯೋಗಿಗಳ ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಎಂಬಿ ಅವರು ವಂದಿಸಿದರು.