ಬಸ್ಸು-ಬೈಕ್ ಢಿಕ್ಕಿ: ಸವಾರ ಸ್ಥಳದಲ್ಲಿ ಸಾವು
Saturday, August 15, 2026
ಪುತ್ತೂರು: ಬೈಕ್ ಮತ್ತು ಕೆಎಸ್ಸಾರ್ಟಿಸಿ ಬಸ್ಸು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಬೊಳಿಕ್ಕರ ನೆಲ್ಲಿಗುರಿ ಎಂಬಲ್ಲಿ ನಡೆದಿದೆ.
ಕುಮಾರಮಂಗಲ ಬಳಿಯ ಬಂಬಿಲ ಎಂಬಲ್ಲಿನ ನಿವಾಸಿ ಹರಿಶ್ಚಂದ್ರ ಗೌಡ ಎಂಬವರ ಪುತ್ರ ಅಭಿಲಾಷ್ (24) ಮೃತಪಟ್ಟ ಯುವಕ. ಮಾಡಾವುಕಟ್ಟೆಯಿಂದ ಸವಣೂರು ಕಡೆಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಸವಣೂರು ಕಡೆಯಿಂದ ಪುತ್ತೂರಿಗೆ ಕಡೆಗೆ ಅಭಿಲಾಷ್ ತೆರಳುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿತ್ತು. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ತನಿಖೆ ದಾಖಲಿಸಿಕೊಂಡಿದ್ದಾರೆ.