ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘ: 1.32 ಕೋಟಿ ರೂ. ಲಾಭ, ಶೇ.9.00 ಡಿವಿಡೆಂಡ್

ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘ: 1.32 ಕೋಟಿ ರೂ. ಲಾಭ, ಶೇ.9.00 ಡಿವಿಡೆಂಡ್


ಮಂಗಳೂರು: ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿಯಮಿತ ಮಂಗಳೂರು ಇದರ 20ನೇ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷ ಮೇಘರಾಜ್ ಆರ್. ಜೈನ್ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಘರಾಜ್ ಆರ್. ಜೈನ್ ಅವರು, ವರದಿ ವರ್ಷದಲ್ಲಿ ಸಂಸ್ಥೆಯು ಎಲ್ಲಾ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಉತ್ತಮ ಅಭಿವೃದ್ಧಿಯನ್ನು ಸಾಧಿಸಿದೆ. ಸಂಸ್ಥೆಯು 1.32 ಕೋಟಿ ರೂ. ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ.9.00 ಡಿವಿಡೆಂಡ್‌ನ್ನು ಘೋಷಿಸಿದೆ ಎಂದರು.

ಸಂಸ್ಥೆಯು ಒಟ್ಟು 14688 ‘ಆ’ ವರ್ಗದ ಸದಸ್ಯರನ್ನು ಹೊಂದಿದ್ದು, 2.13 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಸಂಸ್ಥೆಯು 101.42 ಕೋಟಿ ರೂ. ಠೇವಣಿಯನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 98.83 ಕೋಟಿ ರೂ. ಸಾಲವನ್ನು ನೀಡಿದೆ ಎಂದರು. 

ಹೊಸ ಶಾಖೆಗಳು: ಸಂಸ್ಥೆಯು ಈಗಾಗಲೇ 15 ಶಾಖೆಗಳನ್ನು ಹೊಂದಿದ್ದು, ಮುಂದಿನ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕುಂದಾಪುರ, ಕಾಪು, ಬ್ರಹ್ಮಾವರ ಹಾಗೂ ಉಡುಪಿಯಲ್ಲಿ ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.

ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಂಸ್ಥೆಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು,  ನವೋದಯ  ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರುಗಳಾದ  ಭಾಸ್ಕರ್ ಎಸ್. ಕೋಟ್ಯಾನ್, ಎಸ್. ರಾಜು ಪೂಜಾರಿ, ಎಂ. ವಾದಿರಾಜ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಮೋನಪ್ಪ ಶೆಟ್ಟಿ ಎಕ್ಕಾರು, ಸುನೀಲ್ ಕುಮಾರ್ ಬಜಗೋಳಿ, ಟಿ. ರಾಘವ ಶೆಟ್ಟಿ, ಎಸ್. ಜಗದೀಶ್ಚಂದ್ರ ಅಂಚನ್, ನಜೀರ್ ಹುಸೈನ್, ಸಾವಿತ್ರಿ ರೈ ಕೆ, ಗುಲ್ಜರ್ ಹುಸೈನ್, ಮಹೇಶ್ ಹೆಗ್ಡೆ, ಪೂರ್ಣಿಮಾ ಶೆಟ್ಟಿ, ಲೆಕ್ಕ ಪರಿಶೋಧಕ ಪಿ. ನರೇಂದ್ರ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ ಎಂ. ಹಾಗೂ ಸಂಸ್ಥೆಯ ಕಾನೂನು ಸಲಹೆಗಾರ ಜನಾರ್ಧನ ಕುಡುಪು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article