ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
Monday, August 24, 2026
ಮಂಗಳೂರು: ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
ಜ್ಞಾನ, ಕಲಿಕೆ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಪೋಷಿಸುವಲ್ಲಿ ಗ್ರಂಥಾಲಯಗಳು ಮತ್ತು ಗ್ರಂಥಪಾಲಕರ ಅಮೂಲ್ಯ ಪಾತ್ರವನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
ಡಾ. ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹ. ಗಣಿತಜ್ಞರೂ ಆಗಿದ್ದ ಅವರು, ಶಿಕ್ಷಣದ ಮೇಲೆ ಪ್ರಭಾವವನ್ನು ಬೀರಿದ್ದಾರೆ ಎಂದು ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಹೇಳಿದರು.
ಪ್ರಸಿದ್ಧ ಭಾರತೀಯ ಗ್ರಂಥಪಾಲಕ, ಗಣಿತಜ್ಞ ಮತ್ತು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜೀವನ, ಕೊಡುಗೆಗಳ ಕುರಿತು ಜಾನ್ಸನ್ ಜಾಯ್ ಲೋಬೊ ಅವರು ಮಾತನಾಡಿದರು.
ಆಡಳಿತ ಉಪ ಪ್ರಾಂಶುಪಾಲ ಧೃತಿ ವಿ. ಹೆಗ್ಡೆ ಮತ್ತು ಆಡಳಿತ ಅಧಿಕಾರಿ ಅಶ್ವಿಲ್ ಕರ್ಕೇರ ಅವರು ಮಾತನಾಡಿದರು.
ಗ್ರಂಥಾಲಯದ ಸಹಾಯಕ ಮುಖ್ಯಸ್ಥೆ ದಿವ್ಯಾ ಜೆ.ಎಸ್., ಕೊಡಿಯಾಲ್‌ಬೈಲ್ ಕ್ಯಾಂಪಸ್‌ನ ಗ್ರಂಥಪಾಲಕ ವಸಂತ್ ಉಪಸ್ಥಿತರಿದ್ದರು.
ಪಂಚಮಿ ಸ್ವಾಗತಿಸಿ, ನಮಿತಾ ಅವರು ವಂದಿಸಿದರು.