1.49 ಕೋಟಿ ಉದ್ದಿಮೆಗಳು ಎಂಎಸ್‌ಎಂಇಯಲ್ಲಿ ನೋಂದಣಿ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ಇಲ್ಲಿನ ರೆಡ್‌ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಂಪಿಸಿ- ರೋಟರಿ ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್ ಅಪ್ ಕಾನ್‌ಕ್ಲೇವ್ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿಗಳ ಒಳಗೊಳ್ಳುವಿಕೆ, ಪಡೆದಿರುವ ಸಾಲದ ಮೊತ್ತವು ಎಂಎಸ್‌ಎಂಇಯಲ್ಲಿರುವ ಭದ್ರತೆ, ಕ್ಷೇತ್ರ ವಿಸ್ತರಣೆಯ ವಿಶಾಲತೆಯನ್ನು ಬಿಂಬಿಸುತ್ತದೆ. ಶೇ 1ರಷ್ಟು ಜನರು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯ. ಇನ್ನುಳಿದವರು ಸ್ವಂತ ಉದ್ಯೋಗ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬೇಕಾಗಿದೆ. ಎಂಎಸ್‌ಎಂಇಗಳಿಗೆ ಸರ್ಕಾರ ನೀಡುವ ಸಾಲ ಸೌಲಭ್ಯ ಪಡೆದು ಯುವಜನರು ಉದ್ಯೋಗದಾತರಾಗಲು ಯೋಚಿಸಬೇಕು ಎಂದರು.
ಎಂಆರ್‌ಪಿಎಲ್ ಮೆಟೀರಿಯಲ್ಸ್ ಜಿಜಿಎಂ ಶರತ್ ಬುಂದಲೆ ಎಸ್., ಕರ್ಣಾಟಕ ಬ್ಯಾಂಕ್ ಸಿಒಒ ರಾಜ ಬಿ.ಎಸ್., ಜಪಾನ್, ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸದಸ್ಯ ಪ್ರೊ. ಹರಿಕೃಷ್ಣ ಭಟ್, ಅಸೋಸಿಯೇಟ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ಕಾನ್ಕ್ಲೇವ್ ನಿರ್ದೇಶಕ ಎಸ್.ಎಸ್. ನಾಯಕ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ನ ಯು. ರಾಮ ರಾವ್, ಕಾರ್ಯದರ್ಶಿ ಪಿ.ಜಿ. ಮಹೇಶ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್, ಕಾರ್ಯದರ್ಶಿ ಜಾಕ್ಸನ್ ಸಲ್ಡಾನ, ಕಾರ್ಯಕ್ರಮ ಸಂಯೋಜಕ ಡ್ಯಾರಿಲ್ ಡಿಸೋಜ, ಡಾ. ದೇವದಾಸ್ ರೈ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಜನರನ್ನು ಗೌರವಿಸಲಾಯಿತು. ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ಗಳಿಗೆ ಸಂಬಂಧಿಸಿ ಆರು ಅಧಿವೇಶನಗಳು ನಡೆದವು.