ಆ.16ರಂದು ವಿಪ್ರ ವೇದಿಕೆ ಕೋಡಿಕಲ್ ದಶಮಾನೋತ್ಸವ ಸಮಾರೋಪ
ಮಂಗಳೂರು: ವಿಪ್ರ ವೇದಿಕೆ ಕೋಡಿಕಲ್‌ನ ದಶಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮ ಆ.16ರಂದು ಬೆಳಗ್ಗೆ 8.30ರಿಂದ ಸಂಜೆ 6.30ರ ವರೆಗೆ ಸಂಘಟನೆಯ ಟ್ರಸ್ಟಿ ವಿಶ್ವಕುಮಾರ್ ಜೋಯಿಸ್ ಅವರ ಮನೆ ‘ಬೆನಕ ಜ್ಯೋತಿಷ್ಯಾಲಯ’ದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8.30ರಿಂದ ಭಗವದ್ಗೀತಾ ಸಾರ, 9.30ಕ್ಕೆ ಸಮಾರೋಪ ಸಮಾರಂಭದ ಉದ್ಘಾಟನೆ ನಡೆಯಲಿದ್ದು, ವಿದ್ವಾನ್ ಪಂಜ ಭಾಸ್ಕರ ಭಟ್ ಕೆ. ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಉರ್ವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಡಿ. ರಮೇಶ್ ತಂತ್ರಿ, ಮಂಗಳಾದೇವಿ ಕ್ಷೇತ್ರದ ಮೊಕ್ತೇಸರ ಅರುಣ್ ಐತಾಳ್, ಎಂಜಿನಿಯರ್ ವೈ. ಕೇಶವ ಭಟ್ ಭಾಗವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಅವರು ‘ವಿಪ್ರ ಚಿತ್ರ ಸಂಚಯ’ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ರವಿ ಅಲೆವೂರಾಯ ವರ್ಕಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ 11.15ರಿಂದ ಬ್ರಾಹ್ಮಣ್ಯ-ಅನುಷ್ಠಾನ ವಿಚಾರ ಗೋಷ್ಠಿ ನಡೆಯಲಿದೆ. ಬಹುಶ್ರುತ ವಿದ್ವಾಂಸ ಡಾ. ಸತ್ಯಕೃಷ್ಣ ಭಟ್, ವೇ. ಮೂ. ವಿಶ್ವಕುಮಾರ್ ಜೋಯಿಸ, ವೇದಿಕೆ ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2ರಿಂದ ‘ಶ್ರೀಕೃಷ್ಣ ಚಂದ್ರಾವಳಿ’ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ 4ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ವೇ.ಮೂ. ಸುಬ್ರಹ್ಮಣ್ಯ ತಂತ್ರಿ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಮುಖರಾದ ಪ್ರದೀಪ ಕುಮಾರ ಕಲ್ಕೂರ, ರಾಘವೇಂದ್ರ ರಾವ್ ಎಚ್.ವಿ., ರಮೇಶ್ ರಾವ್ ಕಲ್ಬಾವಿ, ದಾಮೋದರ ಭಟ್ ತಲೆಕಳ, ಅನೂಪ್ ಕುಮಾರ್ ಬಾಗ್ಲೋಡಿ, ಗಿರೀಶ್ ರಾವ್ ಕೆ. ಭಾಗವಹಿಲಿದ್ದಾರೆ ಎಂದರು.
ವೇದಿಕೆ ಉಪಾಧ್ಯಕ್ಷ ವಿಶ್ವೇಶ್ವರ ಭಟ್ ತೆಕ್ಕೆಕೆರೆ, ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲು, ಟ್ರಸ್ಟಿಗಳಾದ ವೇ.ಮೂ. ವಿಶ್ವ ಕುಮಾರ್ ಜೋಯಿಸ, ಅನೂಪ್ ರಾವ್ ಬಾಗ್ಲೋಡಿ, ವಿದ್ಯಾ ಗಣೇಶ್ ರಾವ್, ಪ್ರಭಾವತಿ ಮಡಿ ಉಪಸ್ಥಿತರಿದ್ದರು.