ಸಂಪಿಗೆ ಹಾಲು ಉತ್ಪಾದಕರ ಸಂಘದ ವಾಷಿ೯ಕ ಸಭೆ: ಕಾಯ೯ದಶಿ೯ಗೆ ಬೀಳ್ಕೋಡುಗೆ

ಸಂಪಿಗೆ ಹಾಲು ಉತ್ಪಾದಕರ ಸಂಘದ ವಾಷಿ೯ಕ ಸಭೆ: ಕಾಯ೯ದಶಿ೯ಗೆ ಬೀಳ್ಕೋಡುಗೆ


ಮೂಡುಬಿದಿರೆ: ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ವಾಷಿ೯ಕ ಮಹಾಸಭೆ ಮತ್ತು ಸಹಕಾರ ಸಂಘದಲ್ಲಿ ಕಳೆದ 28 ವಷ೯ಗಳಿಂದ ಕಾಯ೯ದಶಿ೯ಯಾಗಿ ಹಾಗೂ ಕೃತಕ ಗಭ೯ಧಾರಣ ತಂತ್ರಜ್ಞರಾಗಿ ಕಾಯ೯ನಿವ೯ಹಿಸಿ ಸೇವಾ ನಿವೃತ್ತಿ ಹೊಂದಿರುವ ಪಿ. ರಾಮಚಂದ್ರ ಅವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭವು ಸಂಘದ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಾಮಚಂದ್ರ ಅವರು ಸಂಘದ ಬೆಳವಣಿಗೆಗೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದರು. 

ನಾಗರಾಜ ಕಕೇ೯ರಾ ಅವರು ಅಧ್ಯಕ್ಷತೆ ವಹಿಸಿದ್ದರು.

ದ.ಕ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಸುಬ್ಬರಾವ್, ಒಕ್ಕೂಟದ ಮಂಗಳೂರು ವಿಸ್ತರಣಾಧಿಕಾರಿ ಸುಚಿತ್ರ, ಐಶ್ವಯ೯, ಒಕ್ಕೂಟದ ವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ, ಲೆಕ್ಕ ಪರಿಶೋಧಕರಾಗಿರುವ ಹೆನ್ರಿ ಡಿ'ಸೋಜಾ, ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಶುಭ ಹಾರೈಸಿದರು.

ಪ್ರವೀಣ್ ಭಂಡಾರಿ ಕಾಯ೯ಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಸಿ. ಜಗದೀಶ ರಾವ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article