ಮಾದಕ ಸೇವನೆ: 6 ಮಂದಿಯ ಬಂಧನ
Wednesday, August 5, 2026
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಪೊಲೀಸರು 6 ಮಂದಿಯನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮಂಗಳೂರು ರೈಲ್ವೆ ಜಂಕ್ಷನ್ ಬಸ್ ನಿಲ್ದಾಣದ ಬಳಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ನಿವಾಸಿ ಇಸ್ಮಾಯಿಲ್ ಸಮೀರ್ ಮತ್ತು ಪೆರ್ಮನ್ನೂರು ಗ್ರಾಮದ ಮುಡಿಪೋಡಿ ನಿವಾಸಿ ಶವನ್ ಎಂಬವರನ್ನು ಕಂಕನಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಪಾಂಡೇಶ್ವರ ಮಾಲ್‌ವೊಂದರ ಬಳಿ ಅಮಲೇಶ್ ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಎನ್‌ಐಟಿಕೆ ಅಂಡರ್ ಪಾಸ್ ಬಳಿ ಪ್ರಖ್ಯಾತ್ ಸಾಯಿ, ಕೆ. ಅಭಿನವ್, ಸಾಯಿ ಸಮನ್ಯು ಎಂಬವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.