ಯುವವಾಹಿನಿ ಮಂಗಳೂರು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ
ಘಟಕದ ಅಧ್ಯಕ್ಷ ಹರೀಶ್ ಕೆ.ಸುವರ್ಣ ಮಾತನಾಡಿ, ಇಂದು ನಾವು ಸರ್ವ ರೀತಿಯಲ್ಲೂ ಸ್ವಾತಂತ್ರ್ಯ ಮುಕ್ತರಾಗಿದ್ದು, ಅತೀಯಾದ ವಾಕ್ ಸ್ವಾತಂತ್ರ್ಯದಿಂದ ದೇಶಾದ್ಯಂತ ಸಮಸ್ಯೆಗಳು ಎದುರಾಗಿದ್ದು, ಬಾಹ್ಯ ಶಕ್ತಿಗಳಿಗಿಂತ ಅಂತರಿಕ ಭದ್ರತೆಗಳು ನಮ್ಮನ್ನು ಕಾಡುತ್ತೀರುವುದು ವಿಪರ್ಯಾಸವೆಂದರೆ ತಪ್ಪಾಗದು, ಅದಕ್ಕಾಗಿ ನಮ್ಮ ಮುಂದಿನ ಜನಾಂಗದ ಮಕ್ಕಳಿಗೆ ದೇಶ ಪ್ರೇಮ, ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ನಮ್ಮಿಂದಲೇ ಆಗಬೇಕೆಂಬ ಸಂಕಲ್ಪ ನಮ್ಮಲ್ಲಿರಲಿ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಂಗಳೂರು ಘಟಕದ ಗೌರವ ಸದಸ್ಯ ಭಾಸ್ಕರ ಪೂಜಾರಿ ಅವರು ನೆರವೇರಿಸಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದರು.
ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಮಂಗಳೂರು ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಒಂದನೇ ಉಪಾಧ್ಯಕ್ಷ ಯತೀಶ್ ಬಳಂಜ ಸ್ವಾಗತಿಸಿದರು, ಕಾರ್ಯದರ್ಶಿ ಉಷಾ ವಂದಿಸಿ, ಸದಸ್ಯ ಸತೀಶ್. ಕೆ ನಿರೂಪಣೆ ಮಾಡಿದರು. ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
