ಆ.9ರಂದು ಕರ್ನಾಟಕ ವಿಭಾಗೀಯ ಈಶ ಗ್ರಾಮೋತ್ಸವ

ಆ.9ರಂದು ಕರ್ನಾಟಕ ವಿಭಾಗೀಯ ಈಶ ಗ್ರಾಮೋತ್ಸವ

ಮಂಗಳೂರು: ಈಶ ಗ್ರಾಮೋತ್ಸವ 2026ರ 18ನೆ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಗಳು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಆ. 9ರಂದು ಆಯೋಜಿಸಲಾಗಿದೆ.

ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ  ಈ ಬಗ್ಗೆ ಮಾಹಿತಿ ನೀಡಿದ ಈಶ ಸಂಸ್ಥೆಯ ಲತಾ, ಬೆಳಗೆಗ 9.30ಕ್ಕೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ ಎಂದರು.

ಪಂದ್ಯಾಟದಲ್ಲಿ 18 ಪುರುಷರ ವಾಲಿಬಾಲ್ ತಂಡಗಳು ಹಾಗೂ 12 ಮಹಿಳಾ ತ್ರೋಬಾಲ್ ತಂಡಗಳು ಭಾಗವಹಿಸಲಿವೆ. 2004ರಲ್ಲಿ ಆರಂಭವಾದ ಈಶ ಗ್ರಾಮೋತ್ಸವ ಸಾಂಪ್ರದಾಯಿಕ

ಕ್ರೀಡೆಗಳನ್ನು ಪುನರುಜ್ಜೀವನಗೊಳಿಸಲು. ದೈಹಿಕ ಆರೋಗ್ಯ ಉತ್ತೇಜಿಸಲು ಹಾಗೂ ಸಮುದಾಯಗಳ ನಡುವೆ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಕೂಡಿದೆ ಎಂದರು.

ಮೂಡಬಿದಿರೆ ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೂಡಬಿದಿರೆ ತಾಲೂಕಿನ ತಹಶೀಲ್ದಾರ್ ಶ್ರೀಧರಎಸ್. ಮುಂಡಲಮನಿ, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾವದರು ಭಾಗವಹಿಸಲಿದ್ದಾರೆ.

ಕರ್ನಾಟಕ ವಿಭಾಗೀಯ ಪಂದ್ಯಗಳು ರಾಷ್ಟ್ರೀಯ ಫೈನಲ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಬಯಸುವ ತಂಡಗಳಿಗೆ ಪ್ರಮುಖ ಅರ್ಹತಾ ಸುತ್ತು ಆಗಿದೆ.

ರಾಷ್ಟ್ರೀಯ ಪಂದ್ಯಾವಳಿಯಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯನ್ನು ಒಳಗೊಂಡಿದೆ. 40,000ಕ್ಕೂ ಹೆಚ್ಚು ಗ್ರಾಮಗಳನ್ನು ಈ ಪಂದ್ಯಾವಳಿ ತಲುಪಲಿದ್ದು, ಸುಮಾರು 15,000 ಮಹಿಳಾ ಆಟಗಾರರು ಸೇರಿದಂತೆ 7000 ತಂಡಗಳ ಮೂಲಕ 80,000ಕ್ಕೂ ಅಧಿಕ ಆಟಗಾರರು ಭಾಗವಹಿಸಲಿದಾದರೆ. ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಈ ಉತ್ಸವ ಇದೇ ಮೊದಲ ಬಾರಿಗೆ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಪುದುಚೇರಿಯೊಂದಿಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಸಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೂ ವಿಸ್ತರಿಸಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹರ್ಷಾ, ಶ್ರೀಧರ್, ದೀಪಕ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article