ರಥಬೀದಿ ಕಾಲೇಜಿನಲ್ಲಿ JAM, JEST ಮತ್ತು GATE ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಕ್ರಮ
ಬೆಂಗಳೂರಿನ IISC ಯಲ್ಲಿನ PhD ಸಂಶೋಧನಾ ವಿದ್ಯಾರ್ಥಿ ಶಿವಕುಮಾರ ವಿ ಮತ್ತು IISC ಯಲ್ಲಿ ಒ.ಖಿeಛಿh ಪದವಿ ಪಡೆದು ಪ್ರಸ್ತುತ Coal India Ltd ನಲ್ಲಿ Grade-3 Scientific Officer ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ ಪ್ರಸನ್ನಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ JAM, JEST ಮತ್ತು GATE ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ, ಪರೀಕ್ಷಾ ಕ್ರಮಗಳ ಕುರಿತು ಹಾಗೂ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಮುಂದೆ ಅದರಿಂದ ದೊರೆಯುವ ಉನ್ನತ ಶಿಕ್ಷಣದ ಅವಕಾಶಗಳು ಮತ್ತು ವಿದ್ಯಾರ್ಥಿ ವೇತನದ ಕುರಿತು ವಿವರಿಸಿದರು. ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡುವ ಮೂಲಕ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು.
ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿಜ್ಞಾನ ಸಂಘದ ಸಂಯೋಜಕ ಡಾ. ರಮಾಕಾಂತ ಪುರಾಣಿಕ್ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.