ಲಕ್ಷ್ಮಣ್ ಶೆಟ್ಟಿ ಅವರ ನಿಧನಕ್ಕೆ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತಾಪ

ಲಕ್ಷ್ಮಣ್ ಶೆಟ್ಟಿ ಅವರ ನಿಧನಕ್ಕೆ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತಾಪ


ಮಂಗಳೂರು: ಇತ್ತೀಚಿಗೆ ಅಗಲಿದ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ್ ಶೆಟ್ಟಿ ಅವರಿಗೆ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತಾಪ ಸಭೆ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.

ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ, ಮುಖಂಡರಾದ ಸುಧಾಕರ್ ಜೋಗಿ, ಉದಯ ಆಚಾರ್ಯ, ದಿನೇಶ್ ಕುಂಪಲ, ಲ್ಯಾನ್ಸಿ ಲಸ್ರಾಡೊ ಅವರು ಲಕ್ಷ್ಮಣ್ ಶೆಟ್ಟಿ ಅವರ ಪಕ್ಷದ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭ ಮ.ನ.ಪಾ. ಮಾಜಿ ಸದಸ್ಯರಾದ ಕೇಶವ ಮರೋಳಿ, ಅಶೋಕ್ ಡಿ.ಕೆ., ಮುಖಂಡರಾದ ನೀರಜ್ ಚಂದ್ರಪಾಲ್, ವಿಕಾಸ್ ಶೆಟ್ಟಿ, ಗಿರೀಶ್ ಶೆಟ್ಟಿ, ಜಯರಾಜ್ ಕೋಟ್ಯಾನ್, ನಝೀರ್ ಬಜಾಲ್, ಚೇತನ್ ಕುಮಾರ್, ಎಸ್. ಅಪ್ಪಿ, ರೂಪಾ ಚೇತನ್, ಚಂದ್ರಕಲಾ ಜೋಗಿ, ನೀತು ಡಿಸೋಜಾ, ಶಾಂತಲಾ ಗಟ್ಟಿ, ತನ್ವೀರ್ ಶಾ, ಉದಯ ಕುಂದರ್, ಅಲಿಸ್ಟರ್ ಡಿಕುನ್ಹ, ನೆಲ್ಸನ್ ಲೋಬೋ, ವೆಲ್ವಿನ್ ಜೈಸನ್, ಸುಹಾನ್ ಆಳ್ವ, ರೋಬಿನ್ ಪ್ರೀತಮ್, ಲಿಯಾಖತ್ ಶಾ, ನಿತ್ಯಾನಂದ ಶೆಟ್ಟಿ, ಶಬ್ಬೀರ್ ಎಸ್., ಜೇಮ್ಸ್ ಕದ್ರಿ, ರಿತೇಶ್ ಅಂಚನ್, ಯಶವಂತ ಪ್ರಭು, ಫಯಾಝ್ ಅಮ್ಮೆಮ್ಮಾರ್, ರವಿ ಪೂಜಾರಿ ದೆಮ್ಮಲೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article