ಆಂಬುಲೆನ್ಸ್ ಜಾಗೃತಿ ರ‍್ಯಾಲಿ: ಚಾಲನೆ

ಆಂಬುಲೆನ್ಸ್ ಜಾಗೃತಿ ರ‍್ಯಾಲಿ: ಚಾಲನೆ


ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆ ಹಾಗೂ ಮಂಗಳೂರು ನಗರ ಸಂಚಾರಿ ಪೊಲೀಸರ ಸಹಯೋಗದಲ್ಲಿ ಗುರುವಾರ ಆಂಬುಲೆನ್ಸ್ ಜಾಗೃತಿ ರ‍್ಯಾಲಿ ಆಯೋಜಿಸಲಾಯಿತು. ಕೆಎಂಸಿ ಆಸ್ಪತ್ರೆಯಿಂದ ಆರಂಭವಾದ ರ‍್ಯಾಲಿಗೆ ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆಂಬುಲೆನ್ಸ್ ಸೈರನ್ ಹಾಗೂ ತುರ್ತು ದೀಪ ಆನ್ ಮಾಡಿಕೊಂಡು ಬರುತ್ತಿರುವಾಗ ಪ್ರತಿಯೊಂದು ಕ್ಷಣವೂ ಅಮೂಲ್ಯ. ಆಂಬುಲೆನ್ಸಗೆ ದಾರಿ ಬಿಡುವುದು ಕೇವಲ ಶಿಷ್ಟಾಚಾರವಲ್ಲ, ಅಗತ್ಯವಾದ ಕ್ರಮ. ಜವಾಬ್ದಾರಿಯುತ ವಾಹನ ಚಾಲನೆ, ಅನಗತ್ಯ ಸಂಚಾರ ದಟ್ಟಣೆ ತಪ್ಪಿಸುವುದು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ನೆರವಾಗುತ್ತದೆ ಎಂದರು.

ರ‍್ಯಾಲಿಯು ಕ್ಲಾಕ್ ಟವರ್, ಸಿಟಿ ಸೆಂಟರ್, ಪಿವಿಎಸ್, ಕೊಟ್ಟಾರ ಚೌಕಿ, ಸುರತ್ಕಲ್, ಕೂಳೂರು, ಕಾವೂರು, ಬಜ್ಪೆ, ಕುಂಟಿಕಾನ, ನಂತೂರು, ಫರಂಗಿಪೇಟೆ, ಪಂಪ್ವೆಲ್, ಕಂಕನಾಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕೆಎಂಸಿ ಆಸ್ಪತ್ರೆಗೆ ಮರಳಿತು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಆಂಬುಲೆನ್ಸ್ ಮತ್ತು ಆಟೊ ಚಾಲಕರು ಭಾಗವಹಿಸಿದ್ದರು. ಮಂಗಳೂರಿನ ಸಂಚಾರ ಉಪವಿಭಾಗದ ಪಿಎಸ್‌ಐ ವಿಜಯ್ ಕುಮಾರ್ ಅವರು ರಸ್ತೆ ಸುರಕ್ಷತಾ ಮಾರ್ಗಸೂಚಿಗಳ ಕುರಿತು ಜಾಗೃತಿ ಮೂಡಿಸಿದರು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿ, ತ್ವರಿತ ಚಿಕಿತ್ಸೆ ದೊರಕಲು ನೆರವಾದ ಹಲವು ‘ಫಸ್ಟ್ ರೆಸ್ಪಾಂಡರ್ಸ್’ಗಳನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.

ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಹೆಡ್ ಡಾ. ಜೀಧು ರಾಧಾಕೃಷ್ಣನ್, ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಪ್ರಭು ಮಾತನಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article