ಬಿಜೆಪಿ ಉತ್ತಮ ಜನಪರ ಆಡಳಿತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ: ಎಂ. ನಾಗರಾಜ್

ಬಿಜೆಪಿ ಉತ್ತಮ ಜನಪರ ಆಡಳಿತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ: ಎಂ. ನಾಗರಾಜ್

ಮಂಗಳೂರಿನ ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಭೇಟಿ


ಮಂಗಳೂರು: ಬಿಜೆಪಿ ಉತ್ತಮ ಜನಪರ ಆಡಳಿತದಿಂದ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಹಿಂದೆ ಕೆಲ ವಿಚಾರಗಳಿಗೆ ಆದ್ಯತೆ ನೀಡಲಾಗಿದ್ದರೆ, ಮುಂದಿನ ದಿನಗಳಲ್ಲಿ ಯುವ ಜನತೆಯ ಜೊತೆಗಿದ್ದು ಹೊಸ ವಿಚಾರ, ಆಲೋಚನೆಗಳೊಂದಿಗೆ ಬಿಜೆಪಿ ಕೆಲಸ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಂ. ನಾಗರಾಜ್ ಹೇಳಿದರು.

ಅವರು ಮಂಗಳವಾರ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ, ಪಕ್ಷದ ವತಿಯಿಂದ ಅಭಿನಂದನೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಹಿಂದೆ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಇದ್ದ ಬೇಡಿಕೆಗಳಂತೆ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿ ರದ್ದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಹಲವು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ ಇಂದಿನ ಪ್ರಸ್ತುತತೆಯಲ್ಲಿ ಹಿಂದಿನ ವಿಚಾರಗಳಂತೆ ಸಾಗುವುದು ಸೂಕ್ತವಲ್ಲ. ಅದಕ್ಕಾಗಿ ಯುವ ಜನತೆ ಹಾಗೂ ಹೊಸ ಪೀಳಿಗೆಯ ಮನಸ್ಸನ್ನು ಮುಟ್ಟುವ ಹೊಸ ವಿಚಾರ, ಆಲೋಚನೆಗಳೊಂದಿಗೆ ಕೆಲಸ ಮಾಡಬೇಕಿದೆ. ಯುವಕರ ಬೇಕು-ಬೇಡಗಳನ್ನು ತಿಳಿದುಕೊಂಡು ಕೆಲಸ ಮಾಡುವ ಅಗತ್ಯವಿದೆ. ಅದರಂತೆ ಬಿಜೆಪಿ ಕೆಲಸ ಮಾಡಲಿದೆ ಎಂದರು.

ರಾಜ್ಯಸಭೆಯಲ್ಲಿ ರಾಜ್ಯದ ಪರ ಮಾತನಾಡಬೇಕು ಎಂದುಕೊಂಡಿದ್ದ ನನಗೆ, ಅಲ್ಲಿ ವಿಪಕ್ಷಗಳ ಅಸಹಕಾರದಿಂದ ಮಾತನಾಡಲು ಅವಕಾಶ ಸಿಕ್ಕಿಲ್ಲ. ವಿಪಕ್ಷಗಳು ಈ ರೀತಿ ಅಡ್ಡಿಪಡಿಸುತ್ತಿರುವ ಸ್ಥಿತಿಯನ್ನು ದೇಶ ಗಮನಿಸುತ್ತಿದೆ. ವಂದೇ ಮಾತರಂ ಹಾಡದೇ ಇರುವುದನ್ನೂ ದೇಶ ಗಮನಿಸುತ್ತಿದೆ ಎಂದು ಆರೋಪಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ನೀಟ್ ಮರು ಪರೀಕ್ಷೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ವಿಪಕ್ಷಗಳು ಅದಾವುದನ್ನೂ ಅರ್ಥಮಾಡಿಕೊಳ್ಳದೇ, ಅಧಿಕಾರ ಸಿಕ್ಕಿಲ್ಲ ಎಂದು ಏನು ಬೇಕಾದರೂ ಮಾಡಬಹುದು ಎಂಬ ಚಿಂತನೆಯಲ್ಲಿದ್ದಾರೆ ಎಂದು ಅವರು ಆರೋಪಿಸಿದರು.

ಮೋದಿ @25ಕ್ಕೆ ಚಾಲನೆ:

ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಬೈಠಕ್‌ನಲ್ಲಿ, 2026ರ ಅಕ್ಟೋಬರ್ 7ಕ್ಕೆ ನರೇಂದ್ರ ಮೋದಿ ಅವರ ಸಾರ್ವಜನಿಕ ಬದುಕಿಗೆ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ‘ಮೋದಿ @25'ಕ್ಕೆ ಚಾಲನೆ ನೀಡಲಾಗಿದೆ. ಇದು ಇಡೀ ವಿಶ್ವಮಟ್ಟದ ದಾಖಲೆ. ಅದಕ್ಕಾಗಿ ‘ಸೇವಾ ಸಂಕಲ್ಪ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಆಲಸ್ಯ ಬಿಟ್ಟು ಪಕ್ಷದ ಸಂಘಟನೆ ಹಾಗೂ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಬೈಠಕ್ ಸದ್ಯದಲ್ಲೇ ನಾಲ್ಕು ತಾಸುಗಳ ಸಮಯ ನಡೆಯಿದ್ದು, ಇಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೈಠಕ್‌ನಲ್ಲಿ ಸಂಪೂರ್ಣ ಭಾಗಿಯಾಗಿದ್ದು, ಇಲ್ಲಿ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಮೋದಿ ಅವರು ಈ ಮೂಲಕ ಬಿಜೆಪಿ ಪದಾಧಿಕಾರಿಗಳು, ನಾಯಕರಿಗೆ ಆಲಸ್ಯ ಬಿಟ್ಟು ಬಿಡಬೇಕು ಎಂಬ ಸಂದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿ ಅಭಿಪ್ರಾಯ ಭಾಪಣೆ ಮಾಡಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗೇಶ್ ಕರ್ಣಿಕ್ ಮತ್ತಿತರರು ಇದ್ದರು.

ಪ್ರಮಾಣದಿಂದ ಶೆಟ್ಟಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article