ನಟ ಯಶ್ ಧರ್ಮಸ್ಥಳಕ್ಕೆ ಭೇಟಿ
Tuesday, August 25, 2026
ಉಜಿರೆ: ಚಲನಚಿತ್ರ ನಟ ಯಶ್ ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಚಲನಚಿತ್ರ ರಂಗದಲ್ಲಿ ಯಶ್‌ನ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದ ಹೆಗ್ಗಡೆಯವರು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲೆಂದು ಆಶೀರ್ವದಿಸಿದರು.
ಕ್ಷೇತ್ರದ ಪರವಾಗಿ ಯಶ್ ಅವರನ್ನು ಹೆಗ್ಗಡೆಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ಯಶ್ ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿ ಬಳಿಕ ಪ್ರಯಾಣ ಮುಂದುವರಿಸಿದರು.
ಆರಂಭದದಲ್ಲಿ ಯಶ್ ಬೀಡಿಗೆ ಬಂದಾಗ, ಡಿ. ಹರ್ಷೇಂದ್ರಕುಮಾರ್ ಅವರನ್ನು ಹಾರ ಹಾಕಿ ಸ್ವಾಗತಿಸಿದರು.