ಕ್ರೈಸ್ತ ಧರ್ಮ ಗುರುಗಳ ದಿನಾಚರಣೆ: ಪಾಲ್ದನೆ ಚರ್ಚ್‌ನಲ್ಲಿ ಮೂವರು ಧರ್ಮಗುರುಗಳಿಗೆ ಸನ್ಮಾನ

ಕ್ರೈಸ್ತ ಧರ್ಮ ಗುರುಗಳ ದಿನಾಚರಣೆ: ಪಾಲ್ದನೆ ಚರ್ಚ್‌ನಲ್ಲಿ ಮೂವರು ಧರ್ಮಗುರುಗಳಿಗೆ ಸನ್ಮಾನ


ಮಂಗಳೂರು: ಕೆಥೊಲಿಕರ ಚರ್ಚ್ ಧರ್ಮಗುರುಗಳ ಪೋಷಕ ಸಂತ ಜಾನ್ ಮೇರಿ ವಿಯಾನ್ನಿ ಅವರ ಸ್ಮರಣಾರ್ಥ ಆ.4ನ್ನು ಧರ್ಮಗುರುಗಳ ದಿನವಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಆ.9ರಂದು ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್‌ನಲ್ಲಿ ಬಲಿ ಪೂಜೆಯ ಸಂದರ್ಭ ಪ್ರಧಾನ ಧರ್ಮಗುರು ಸೇರಿದಂತೆ ಮೂವರು ಧರ್ಮಗುರುಗಳನ್ನು ಸನ್ಮಾನಿಸಲಾಯಿತು.

ಪ್ರಧಾನ ಧರ್ಮ ಗುರು ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ಫಾ.ಜೋಸೆಫ್ ಕುವೆಲ್ಲೊ ಅವರನ್ನು ಚರ್ಚ್‌ನ ಕಾರ್ಯದರ್ಶಿ ರೋಷನ್ ಮೊಂತೇರೊ, ಚರ್ಚ್‌ನಲ್ಲಿ ಡಿಯಾಕೋನ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿ ಇಂದು ಪಾಲ್ದನೆಗೆ ಅತಿಥಿಯಾಗಿ ಆಗಮಿಸಿ ಬಲಿ ಪೂಜೆಯಲ್ಲಿ ಸಹಭಾಗಿತ್ವ ವಹಿಸಿದ್ದ ಫಾ. ರೋಶ್ವಿನ್ ಲೋಪೆಜ್ ಅವರನ್ನು ಚರ್ಚ್‌ನ ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಅವರು ಹೂ ಗುಚ್ಛ ನೀಡಿ ಅಭಿನಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article