‘ಎಲ್ಲವೂ ದೇವರ ಮತ್ತು ಜನರ ಪ್ರೀತಿ’: ಯಶ್
Tuesday, August 25, 2026
ಮಂಗಳೂರು: ಮುಂಗಡ ಬುಕಿಂಗ್‌ನಲ್ಲಿ ಟಾಕ್ಷಿಕ್ ಸಿನಿಮಾ ದಾಖಲೆ ಬರೆಯುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ಚಿತ್ರದ ನಾಯಕ ನಟ ಯಶ್, "ಇದೆಲ್ಲವೂ ಶ್ರೀ ಮಂಜುನಾಥ ಸ್ವಾಮಿ ಹಾಗೂ ಜನರ ಆಶೀರ್ವಾದ. ಇದರಲ್ಲಿ ನಮ್ಮದೇನೂ ಇಲ್ಲ, ಎಲ್ಲವೂ ದೇವರ ಮತ್ತು ಜನರ ಪ್ರೀತಿ. ಎಲ್ಲರಿಗೂ ಒಳ್ಳೆಯದಾಗಲಿ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ’ ಎಂದಿದ್ದಾರೆ.
ಟಾಕ್ಷಿಕ್ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನಿಗೆ ಪೂಜೆ ಸಲ್ಲಿಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ, "ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗುವ ಮುನ್ನವೂ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುವುದು ವಾಡಿಕೆ. ಪ್ರತಿ ಸಿನಿಮಾ ರಿಲೀಸ್ ಮುನ್ನ ಇಲ್ಲಿಗೆ ಬಂದು ಸ್ವಾಮಿಯ ಆಶೀರ್ವಾದ ಪಡೆಯುತ್ತೇನೆ. ಆದರೆ ಈ ಬಾರಿ ಚಿತ್ರದ ಕೆಲಸಗಳ ಒತ್ತಡ ಹೆಚ್ಚಿದ್ದ ಕಾರಣ, ಸಿನಿಮಾ ಬಿಡುಗಡೆಯ ಅಂತಿಮ ಕ್ಷಣದಲ್ಲಿ ಕ್ಷೇತ್ರಕ್ಕೆ ಬರಲು ಸಾಧ್ಯವಾಯಿತು, ಎಂದರು.