ಯಶಸ್ವಿ ಉದ್ಯಮಿಯಾಗಲು ಅರ್ಥಿಕ ಪರಿಸ್ಥಿತಿಯೊಂದಿಗೆ, ನೈಪುಣ್ಯತೆ ಹಾಗೂ ಸಮಯದ ಪರಿಕಲ್ಪನೆಯು ಅತ್ಯಗತ್ಯ: ಹರೀಶ್ ಕೆ. ಸುವರ್ಣ
ಮುಖ್ಯ ಅತಿಥಿಯಾದ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಇಂದಿನ ಸಮಾಜದಲ್ಲಿ ಉದ್ಯಮಿಯಾಗಲು ಅರ್ಥಿಕತೆ ಎಷ್ಟು ಮುಖ್ಯವೊ ಸಮಯ ಪ್ರಜ್ಞೆಯೊಂದಿಗೆ ನಮ್ಮಲ್ಲಿ ನೈಪುಣ್ಯತೆಯೂ ಇರಬೇಕು, ಇಂದು ಅಮೆಜಾನ್, ಇನ್ಫೋಸಿಸ್‌ನಂತಹ ಧೈತ್ಯ ಕಂಪೆನಿಗಳು ಸಣ್ಣ ಬಂಡವಾಳದಲ್ಲಿ ಪ್ರಾರಂಭವಾಗಿ, ಹೆಮ್ಮರವಾಗಿ ಬೆಳೆದು, ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿದೆ. ಸಮಯದ ಮಹತ್ವದೊಂದಿಗೆ ಉತ್ತಮ ಗುಣಮಟ್ಟದ ಉದ್ಯಮದಲ್ಲಿ ನಿಮ್ಮನ್ನು ತೊಡಗಿಸಿಕೊಂಡಲ್ಲಿ ಮುಂದೆ ನೀವು ಹೆಸರಾಂತ ಉದ್ಯಮಿಗಳಾಗಬಹುದು ಎಂದರು.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಇಂತಹ ಉದ್ಯಮಶೀಲತೆ ಕಾರ್ಯಕ್ರಮ ರೂಪಿಸುವುದ್ದರಿಂದ, ನಾವು ಹೇಗೆ ಯಶಸ್ವಿ ಉದ್ಯಮಿ ಹಾಗಬಹುದು, ಬ್ಯಾಂಕ್‌ಗಳಿಂದ ಹೇಗೆ ಸಾಲ ಸೌಲಭ್ಯಗಳನ್ನು ಪಡೆಯಬಹುದು, ಮಾರುಕಟ್ಟೆಯಲ್ಲಿ ಹಣಕಾಸು ನಿರ್ವಹಣೆ ಹೇಗೆ ಮಾಡಬಹುದು, ಎಂಬುದನ್ನು ತಿಳಿಸಿದರು.
ವೇದಿಕೆಯಲ್ಲಿದ ಸವಿತಾ ಕೋಟ್ಯಾನ್ ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಕಾರ್ಯದರ್ಶಿ ಉಷಾ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸವಿತಾ ಕೋಟ್ಯಾನ್ ಉಪಸ್ಥಿತರಿದ್ದರು.
ಸಿಡಾಕ್ ಸಂಸ್ಥೆಯ ಪ್ರವೀಶಾ ಕುಕ್ಯಾನ್ ನಿರೂಪಿಸಿದರು, ವಿದ್ಯಾ ವಂದಿಸಿದರು.

