ಉದ್ಯೋಗವಕಾಶ: ನಾಳೆ ಸಂದರ್ಶನ
Monday, August 10, 2026
ಮಂಗಳೂರು: ಅಶೋಕ್ ಲೇಲ್ಯಾಂಡ್ ಶೋರೂಮ್ ವತಿಯಿಂದ ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಖಾಲಿ ಇರುವ ಸೇಲ್ಸ್ ಎಕ್ಸಿಕ್ಯೂಟಿವ್ -10 (ಪುರುಷ), ವಾರಂಟಿ ಅಸಿಸ್ಟೆಂಟ್-2 (ಪುರುಷ), ಟೆಕ್ನಿಶಿಯನ್-8 (ಪುರುಷ), ಶೋರೂಮ್ ಹೋಸ್ಟೆಸ್-2(ಮಹಿಳೆ) ಹುದ್ದೆಗೆ ನೇರ ಸಂದರ್ಶನವನ್ನು ಆ.11 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಅಡ್ಯಾರ್ ಎನ್ ಎಚ್-75 ಓಲ್ಡ್ ಕಣ್ಣೂರು ಚೆಕ್ ಪೊಸ್ಟ್ ಹತ್ತಿರದ ಕಾಂಚನ ಅಟೋಮೋಟಿವ್ ಪ್ರೈವೇಟ್ ಲಿಮಿಟೆಡ್ನಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಪಿ.ಯು.ಸಿ, ಡಿಪ್ಲೋಮಾ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.