ಶಿವಂ ವಂಚನೆ: ಆರೋಪಿ ನ್ಯಾಯಲಯಕ್ಕೆ ಹಾಜರು
Saturday, August 29, 2026
ಮಂಗಳೂರು: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮೂಲಕ 4,500 ಕೋಟಿಗೂ ಹೆಚ್ಚು ವಂಚನೆ ಪ್ರಕರಣದ ಆರೋಪಿ ಶಿವಾನಂದ ನೀಲಣ್ಣವರನನ್ನು ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಆರೋಪಿ ಶಿವಾನಂದ ಬೆಳಗಾವಿ ಸುತ್ತಮುತ್ತ ಸ್ಕೀಮ್ ಮೂಲಕ ಬಹುಕೋಟಿ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಇಡಿ ಅಧಿಕಾರಿಗಳು ಮಂಗಳೂರು ಕೋರ್ಟ್ ಗೆ ಹಾಜರುಪಡಿಸಿ ಕರೆದೊಯ್ದಿದ್ದಾರೆ.