ದ.ಕ. ಆಟೋ ಪ್ರಯಾಣ ದರ ಏರಿಕೆ

ದ.ಕ. ಆಟೋ ಪ್ರಯಾಣ ದರ ಏರಿಕೆ

ಮಂಗಳೂರು: ಆಟೊ ರಿಕ್ಷಾಗಳ ಬಾಡಿಗೆ ದರವನ್ನು ಹೆಚ್ಚಿಸಿದ್ದು, ಇದು ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ. ಕನಿಷ್ಠ ದರ ಮೊದಲ 1.5 ಕಿ.ಮೀಗೆ 40ಕ್ಕೆ ಹೆಚ್ಚಿಸಲಾಗಿದೆ (ಇದು ಈಗ 35 ಇತ್ತು). ನಂತರದ ಪ್ರತಿ ಕಿ.ಮೀಗೆ ದರ 20 ನಿಗದಿ ಪಡಿಸಲಾಗಿದೆ.

ಕಾಯುವ ದರಗಳು: 

ಮೊದಲ 10 ನಿಮಿಷ ಉಚಿತ, ನಂತರದ 15 ನಿಮಿಷದ ವರೆಗೆ ಅಥವಾ ಅದರ ಭಾಗಕ್ಕೆ 5. 

ಪ್ರಯಾಣಿಕರ ಸರಕಿಗೆ (ಲಗೇಜ್) ದರ: 

ಮೊದಲ 20 ಕಿಲೋ ಉಚಿತ. ನಂತರದ 20 ಕಿಲೋಗಳಿಗೆ ಅಥವಾ ಅದರ ಭಾಗಕ್ಕೆ 5. ಈ ಸರಕಿನೊಂದಿಗೆ ಒಬ್ಬ ಪ್ರಯಾಣಿಕರು ಕಡ್ಡಾಯವಾಗಿ ಜೊತೆಗಿರಬೇಕು.

ರಾತ್ರಿ ವೇಳೆ ದರ: 

ರಾತ್ರಿ 10ರಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ಇದೆ ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ. ಕ. ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article