ಮಳೆ ಕಡಿಮೆಯಾಗಿದ್ದರಿಂದ ತಾವಾರಣ ತುಸು ಬಿಸಿಯೇರಿಕೆ

ಮಳೆ ಕಡಿಮೆಯಾಗಿದ್ದರಿಂದ ತಾವಾರಣ ತುಸು ಬಿಸಿಯೇರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಧವಾರ ತಾವಾರಣ ತುಸು ಬಿಸಿಯೇರಿತ್ತು. ಬೆಳಗಿನ ಜಾವದಿಂದಲೇ ಮೋಡ ಬಿಸಿಲಿನಿಂದ ಆರಂಭವಾದ ಅಲ್ಪ ಮಳೆ ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಅಲ್ಪ ಮಳೆಯಾಗಿದೆ. ಬಹುತೇಕ ಸಮಯ ಸೂರ್ಯನ ಪ್ರಖರ ದರ್ಶನದಿಂದ ವಾತಾವರಣ ಕೆಲವೊಮ್ಮೆ ಬಿಸಿಯೇರುತ್ತಿದ್ದು, ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯು ಬುಧವಾರ ಮಳೆಯ ಪ್ರಮಾಣ ಕಡಿಮೆಯಾಗುವುದರಿಂದ ಯಾವುದೇ ಅಲರ್ಟ್ ಘೋಷಿಸಿಲ್ಲ. ಗುರುವಾರ ಕಾಸರಗೋಡು, ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಇರಲಿದ್ದು, ದಿನದಲ್ಲಿ ಎರಡು, ಮೂರು ಸಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಒಂದೆರಡು ಮಳೆ ಹೆಚ್ಚಿರಬಹುದು.

ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 13.1 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬೆಳ್ತಂಗಡಿಯಲ್ಲಿ 16.4 ಮಿಮಿ ಮಿ.ಮೀ ಮಳೆಯಾಗಿದೆ. ದ.ಕ ಜಿಲ್ಲೆಯಲ್ಲಿ ತಾವಾರಣ ತುಸು ಬಿಸಿಯೇರಿದ್ದು, ಗರಿಷ್ಟ 32.6 ಡಿ.ಸೆ, ಕನಿಷ್ಟ 23.1 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಪಚ್ಚಿಮಘಟ್ದ ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಿರಬಹುದು ಎಂದು ಹವಾಮಾಣ ಇಲಾಖೆ ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ಮುಂದಿನ 10 ದಿನಗಳವರೆಗೂ ದಿನದಲ್ಲಿ ಅಲ್ಲಲ್ಲಿ ಎರಡು, ಮೂರು ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ಉತ್ತರ ಭಾರತದ ಮಧ್ಯಪ್ರದೇಶದಲ್ಲಿ ಹೊಸದಾಗಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 15ರಂದು ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಸಾಧ್ಯತೆಗಳಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article