ಶರವು ಮಹಾಗಣಪತಿ ದೇವಸ್ಥಾನದಲ್ಲಿ ಬಳ್ಳಾಲ್ಬಾಗ್ ಗುರ್ಜಿ ದೀಪೋತ್ಸವದ ಅಮೃತ ಮಹೋತ್ಸವದ ಯಶಸ್ಸಿಗೆ ಪ್ರಾರ್ಥನೆ

ಶರವು ಮಹಾಗಣಪತಿ ದೇವಸ್ಥಾನದಲ್ಲಿ ಬಳ್ಳಾಲ್ಬಾಗ್ ಗುರ್ಜಿ ದೀಪೋತ್ಸವದ ಅಮೃತ ಮಹೋತ್ಸವದ ಯಶಸ್ಸಿಗೆ ಪ್ರಾರ್ಥನೆ


ಮಂಗಳೂರು: ಡಿ.5ರಂದು ನಡೆಯಲಿರುವ ಬಳ್ಳಾಲ್ ಭಾಗ್ ಗುರ್ಜಿ ದೀಪೋತ್ಸವದ ಪ್ರಯುಕ್ತ ಮಹಾಗಣಪತಿ ದೇವರಿಗೆ ಸಮರ್ಪಿಸಲಿರುವ ಸ್ವರ್ಣ ಕವಚ ಹಾಗೂ ದೀಪೋತ್ಸವದಂದು ಬಿಡುಗಡೆಗೊಳ್ಳಲಿರುವ ಸ್ಮರಣ ಸಂಚಿಕೆಯ ಆಮಂತ್ರಣ ಪತ್ರಿಕೆಯನ್ನು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶರವು ಶಿಲೆ ಶಿಲೆ ರಾಘವೇಂದ್ರ ಶಾಸ್ತ್ರಿಯವರು ಇತ್ತೀಚಿಗೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸಮಿತಿಯು ಕೈಗೊಂಡಿರುವ ಸ್ವರ್ಣ ಕವಚದ ಚಿನ್ನದ ಲೇಪನ ಕಾರ್ಯವು ಯಶಸ್ವಿಯಾಗಿ ನೆರವೇರಲಿ ಎಂದು ಮಹಾಗಣಪತಿ ದೇವರಲ್ಲಿ ಪ್ರಾರ್ಥಿಸಿ 1 ಗ್ರಾಂ ಚಿನ್ನವನ್ನು ದೇವತಾ ಕಾರ್ಯಕ್ಕಾಗಿ ಕ್ಷೇತ್ರದ ವತಿಯಿಂದ ಸಮರ್ಪಿಸುವ ಮೂಲಕ ಧಾರ್ಮಿಕತೆ, ಸಂಸ್ಕೃತಿ ಹಾಗೂ ನಮ್ಮ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿಯು ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ, ಗೌರವಾಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಕಾರ್ಯಾಧ್ಯಕ್ಷ ಪ್ರಕಾಶ್ ಬಿ. ಸಾಲಿಯಾನ್, ಕಾರ್ಯದರ್ಶಿ ಜಯಂತ್ ಶೆಟ್ಟಿಗಾರ್, ಖಜಾಂಜಿ ರಮಾನಂದ ಭಂಡಾರಿ, ಗಣೇಶ್ ಭಟ್ ,ಲೋಕನಾಥ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಪ್ರವೀಣ್ ಕುಕ್ಯಾನ್, ವಸಂತ್ ರಾವ್, ರಿತೇಶ್ ಶೆಟ್ಟಿ, ಆದಿತ್ಯ ಶೆಟ್ಟಿ, ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article