ಉದ್ಯಮ ವಿಸ್ತರಣೆಗೆ ಆದ್ಯತೆ
ಮಂಗಳೂರು: ಜಪಾನಿನ ಬ್ರಿಡ್ಜ್ ಸ್ಟೋನ್ ಕಾರ್ಪೊರೇಶನ್ ಸಮೂಹ ಸಂಸ್ಥೆ ಬ್ರಿಡ್ಜ್ ಸ್ಟೋನ್ ಇಂಡಿಯಾ,ದೇಶದಲ್ಲಿ ತನ್ನ 30 ವರ್ಷಗಳ ಯಶಸ್ವಿ ಕಾರ್ಯಾಚರಣೆ ಆಚರಿಸಿದೆ.
ಬ್ರಿಡ್ಜ್ ಸ್ಟೋನ್ ಕಾರ್ಪೊರೇಶನ್ ತನ್ನ ಸ್ಥಾಪನೆ ದಿನದಿಂದ ಏಷ್ಯಾದ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ವಿದೇಶಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಿಸಲು ಆದ್ಯತೆ ನೀಡಿದೆ. ಈ ಸಂಸ್ಥೆ ಜಗತ್ತಿನ 150 ಕ್ಕೂ ಹೆಚ್ಚು ದೇಶಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಬೆಸೆದುಕೊಂಡಿರುವ ಉದ್ಯಮ ಚಟುವಟಿಕೆಗಳನ್ನು ಸ್ಥಾಪಿಸಿ ತೊಡಗಿಸಿಕೊಂಡಿದೆ.
ಬ್ರಿಡ್ಜ್ ಸ್ಟೋನ್ ಇಂಡಿಯಾ ನವದೆಹಲಿಯಲ್ಲಿ ತನ್ನ ಪ್ರಮುಖ ಪಾಲುದಾರರನ್ನು ಗೌರವಿಸಲು ಸಮಾರಂಭ ಆಯೋಜಿಸಿ, ಕಂಪನಿ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ತನ್ನ ಪಾಲುದಾರರ ಅಮೂಲ್ಯ ಕೊಡುಗೆಗಳನ್ನು ಗೌರವಿಸಿತು. ಸಂಭ್ರಮಾಚರಣೆಗೆ ಭಾರತ ಮತ್ತು ಭೂತಾನ್ ಸಾಮ್ರಾಜ್ಯದ ಅಸಾಧಾರಣ ಮತ್ತು ಪೂರ್ಣಪ್ರಮಾಣದ ರಾಯಭಾರಿ ಒನೊ ಕೆ ಯಿಚಿ ಅವರು ಮುಖ್ಯ ಅತಿಥಿಯಾಗಿದ್ದರು.
ನಿಗಮದ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಅಸ್ಥಾನ, ಐ.ಎ.ಎಸ್ ಉಪಸ್ಥಿತರಿದ್ದರು.