ವಿಶ್ವ ಹಿರಿಯ ನಾಗರಿಕರ ದಿನಾಚರಣೆ: 107 ಮಂದಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ
ಅತಿಥಿ ಭಾಷಣಕಾರ ಜೆ. ಜೆ. ಪಿಂಟೊ ಕಾರ್ಯಕ್ರಮವನ್ನು ಉದ್ಘಾಟಿಸಿ, “ನಮ್ಮ ಹಿರಿಯರು, ನಮ್ಮ ಮಾರ್ಗದರ್ಶಕರು: ಅವರ ಗೌರವ, ಆರೈಕೆ - ಕಲಿಕೆ” ವಿಷಯದ ಕುರಿತು ಮಾತನಾಡಿದರು. ಇನ್ನೋರ್ವ ಅತಿಥಿ ಉದಯ್ ಕುಮಾರ್ ಹಿರಿಯ ನಾಗರಿಕರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳು, ಕಲ್ಯಾಣ ಯೋಜನೆಗಳು ಮತ್ತು ಸವಲತ್ತುಗಳ ಕುರಿತು ವಿವರಿಸಿದರು.
ಪ್ರವೀಣ್ ಚಂದ್ರ ಜೈನ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಯೋಜನೆ ಮತ್ತು ಆಯೋಜನೆಗೆ ಮಾರ್ಗದರ್ಶನ ನೀಡಿದರು. ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ್ ಅಧ್ಯಕ್ಷತೆ ವಹಿಸಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿ, ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದಲ್ಲಿ 136 ಹಿರಿಯ ನಾಗರಿಕರು ಭಾಗವಹಿಸಿದ್ದರು. ಅವರಲ್ಲಿ 107 ಮಂದಿ ಕಾರ್ಯಕ್ರಮದ ಮೂಲಕ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಪಡೆದರು.
ರೋಟರಿ ಸಂಸ್ಥೆಗಳ ಮುಖ್ಯಸ್ಥರಾದ ತಿಲಕ ಜೈನ್, ಲಕ್ಷ್ಮಿ ಮರಾಠೆ ಹಾಗೂ ರವಿ ಕುಮಾರ್ ಕಾರ್ಯಕ್ರಮದ ಸಂಘಟನೆಗೆ ಬೆಂಬಲ ನೀಡಿದರು. ಆಡಳಿತ ಅಧಿಕಾರಿ ಪ್ರಫುಲ್, ವ್ಯವಸ್ಥಾಪಕ ಸತೀಶ್, ಶಿಕ್ಷಕರು, ಇಂಟ್ರಾಕ್ಟ್ ಕ್ಲಬ್‌ನ ಸದಸ್ಯರು ಹಾಗೂ ಬೋಧಕೇತರ ಸಿಬ್ಬಂದಿ ಸಹಕಾರ ನೀಡಿದರು.
ಅಬ್ದುಲ್ ರೌಫ್, ರತ್ನಾಕರ ಜೈನ್ ಮತ್ತು ಸಂದೀಪ್ ನಾಯಕ್ ಸಕ್ರಿಯವಾಗಿ ಪಾಲ್ಗೊಂಡರು. ಸಮಾರಂಭದ ನಿರೂಪಣೆಯನ್ನು ಗಜಾನನ ಮರಾಠೆ ನಿರ್ವಹಿಸಿದರು. ಕ್ಲಬ್ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ವಂದಿಸಿದರು.