ಮೂಡುಬಿದಿರೆ ಜೈನ್ ಮಿಲನ್ ವತಿಯಿಂದ 150ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ
ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಟಿ.ಎನ್. ಖಂಡಿಗ ಅವರು ತಮ್ಮ ಉಪನ್ಯಾಸದಲ್ಲಿ ಕರ್ಮ ಮತ್ತು ಧ್ಯಾನದ ನಡುವಣ ಮಹಾಕವಿ ರತ್ನಾಕರ ವರ್ಣಿಯ ಲೌಕಿಕ ಮತ್ತು ಅಲೌಕಿಕ ವಿಚಾರಧಾರೆ, ಆತ್ಮಸಂಯಮದ ಕುರಿತಾದ ಅವರ ಅನಿಸಿಕೆ ಹಾಗೂ ನಡತೆಯ ಮೂಲಕ ಜೀವನ ಮೌಲ್ಯಗಳ ಉತ್ಕೃಷ್ಟತೆಯ ಕುರಿತು ಮಹಾಕವಿಯ ನಿಲುವನ್ನು ವಿವರಿಸಿದರು.
ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 150ಕ್ಕೂ ಹೆಚ್ಚು ಮಂದಿ ಸದಸ್ಯರು ಶಿಬಿರದ ಪ್ರಯೋಜನ ಪಡೆದರು. ಡಾ. ಅಕ್ಷತಾ ನಾಯಕ್ ಅವರನ್ನು ಗೌರವಿಸಲಾಯಿತು.
ಶ್ರೀಪಾಲ್ ಎಸ್. ಅವರು ಜೈನ್‌ಪೇಟೆಯ ರತ್ನಾಕರ ವರ್ಣಿ ಸ್ಮೃತಿಮಂಟಪದ ನಿರ್ವಹಣೆಗಾಗಿ ರೂ. ಒಂದು ಲಕ್ಷ ಮೊತ್ತವನ್ನು ನಿರಖ ಠೇವಣಿಯಾಗಿ ಇರಿಸಿರುವ ಕುರಿತು ಮಾಹಿತಿ ನೀಡಿದರು.
ಜುಲೈ ತಿಂಗಳ ಮಾಸಿಕ ವರದಿಯನ್ನು ಕಾರ್ಯದರ್ಶಿ ಶಶಿಕಾಂತ್ ಎಳನೀರು ವಾಚಿಸಿದರು. ಕೋಶಾಧಿಕಾರಿ ಶ್ರೇಯಾಂಸ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು.
ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು. ವಲಯ ನಿರ್ದೇಶಕರಾದ ವೀರ್ ಜಯರಾಜ ಕಂಬಳಿ ಹಾಗೂ ಶ್ವೇತಾ ಜೈನ್ ಉಪಸ್ಥಿತರಿದ್ದರು.
ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಅನಂತವೀರ ಜೈನ್ ವಂದಿಸಿದರು. ಚೇತನಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜೇಂದ್ರ ಅವರ ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.