ಎಕ್ಸಲೆಂಟ್ ವಿದ್ಯಾರ್ಥಿಗಳಿಂದ ಗೋಡಂಬಿ ಉದ್ಯಮ, ಎಸ್‌ಕೆಎಫ್ ಎಲಿಕ್ಸಿರ್‌ಗೆ ಶೈಕ್ಷಣಿಕ ಭೇಟಿ

ಎಕ್ಸಲೆಂಟ್ ವಿದ್ಯಾರ್ಥಿಗಳಿಂದ ಗೋಡಂಬಿ ಉದ್ಯಮ, ಎಸ್‌ಕೆಎಫ್ ಎಲಿಕ್ಸಿರ್‌ಗೆ ಶೈಕ್ಷಣಿಕ ಭೇಟಿ


ಮೂಡುಬಿದಿರೆ: ಕೈಗಾರಿಕೆಗಳ ಕಾರ್ಯನಿರ್ವಹಣೆ ಹಾಗೂ ಉತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಿರಿ ಸಮೀಪದ ಧನಲಕ್ಷ್ಮಿ ಗೋಡಂಬಿ ಉದ್ಯಮ ಹಾಗೂ ಬನ್ನಡ್ಕದಲ್ಲಿರುವ ಎಸ್‌ಕೆಎಫ್ ಎಲಿಕ್ಸಿರ್ ಇಂಡಿಯಾ ಪ್ರೈ. ಲಿ.ಗೆ ಒಂದು ದಿನದ ಶೈಕ್ಷಣಿಕ ಕ್ಷೇತ್ರ ಭೇಟಿಯನ್ನು ಆಯೋಜಿಸಲಾಗಿತ್ತು.

ವಿದ್ಯಾಗಿರಿ ಸಮೀಪದ ಧನಲಕ್ಷ್ಮಿ ಗೋಡಂಬಿ ಉದ್ಯಮಕ್ಕೆ ಮೊದಲ ಭೇಟಿ ನೀಡಲಾಯಿತು. ಇಲ್ಲಿ ಗೋಡಂಬಿಯನ್ನು ಬಳಕೆಗೆ ಸಿದ್ಧ ಉತ್ಪನ್ನವಾಗಿ ಸಂಸ್ಕರಿಸುವ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಉದ್ಯಮದ ಮಾಲೀಕ ಬಾಲರಾಮ್ ಹಾಗೂ ಸಿಬ್ಬಂದಿ ಉತ್ಪಾದನೆ ಮತ್ತು ಸಂಸ್ಕರಣಾ ವಿಧಾನಗಳನ್ನು ವಿವರಿಸಿದರು.

ಬಳಿಕ ಬನ್ನಡ್ಕದಲ್ಲಿರುವ ಎಸ್‌ಕೆಎಫ್ ಎಲಿಕ್ಸಿರ್ ಇಂಡಿಯಾ ಪ್ರೈ. ಲಿ.ಗೆ ಭೇಟಿ ನೀಡಲಾಯಿತು. ಇಲ್ಲಿ ಕೂಲರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಹಾಗೂ ಕಂಟ್ರೋಲ್ ಪ್ಯಾನೆಲ್‌ಗಳ ಉತ್ಪಾದನೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ರಾಮಕೃಷ್ಣ ಆಚಾರ್ ಹಾಗೂ ಸಿಬ್ಬಂದಿ ಕೈಗಾರಿಕೆಯ ಕಾರ್ಯನಿರ್ವಹಣೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರ ಭೇಟಿಯಲ್ಲಿ ಉತ್ಸಾಹ ಮತ್ತು ಕುತೂಹಲದಿಂದ ಭಾಗವಹಿಸಿ ಕೈಗಾರಿಕೆಗಳ ಕುರಿತು ಜ್ಞಾನ ಪಡೆದರು. 

ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಹ ಮುಖ್ಯಶಿಕ್ಷಕ ಜಯಶೀಲ್, ಯೋಗ ಶಿಕ್ಷಕಿ ನಿರ್ಮಲಾ ಹಾಗೂ ವಾರ್ಡನ್ ರುದ್ರೇಶ್ ನಾಯಕ್ ವಿದ್ಯಾರ್ಥಿಗಳೊಂದಿಗೆ ಇದ್ದರು.

ಕ್ಷೇತ್ರ ಭೇಟಿ ಯೋಜನೆಯನ್ನು ಹಮ್ಮಿಕೊಂಡ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಹಾಗೂ ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್ ಮಾರ್ಗದರ್ಶನ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article