ಮೂಡುಬಿದಿರೆಯಲ್ಲಿ 19ನೇ ರಾಜ್ಯಮಟ್ಟದ ಸ್ಕ್ವೇ ಚಾಂಪಿಯನ್‌ಶಿಪ್, ಆಯ್ಕೆ ಟ್ರಯಲ್ಸ್

ಮೂಡುಬಿದಿರೆಯಲ್ಲಿ 19ನೇ ರಾಜ್ಯಮಟ್ಟದ ಸ್ಕ್ವೇ ಚಾಂಪಿಯನ್‌ಶಿಪ್, ಆಯ್ಕೆ ಟ್ರಯಲ್ಸ್


ಮೂಡುಬಿದಿರೆ: ಸ್ಕ್ವೇ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ಕ್ವೇ ಅಸೋಸಿಯೇಷನ್ ವತಿಯಿಂದ  19ನೇ ರಾಜ್ಯಮಟ್ಟದ ಸ್ಕ್ವೇ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ಸ್ ಭಾನುವಾರ ಮೂಡುಬಿದಿರೆಯ ಬ್ರಹ್ಮಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡಾ ತರಬೇತಿ ಶಿಬಿರಗಳು ಅತ್ಯಗತ್ಯ. ದೇಶದ ಯಾವುದೇ ತಾಲೂಕು ಕೇಂದ್ರದಲ್ಲಿ ಇಲ್ಲದ ಗುಣಮಟ್ಟದ ‘ಸಿಂಥೆಟಿಕ್ ಟ್ರ್ಯಾಕ್’ ಸೌಲಭ್ಯ ಮೂಡುಬಿದಿರೆಯಲ್ಲಿದೆ. 

ಸ್ಥಳೀಯ ಪ್ರತಿಭೆಗಳು ಇಂತಹ ಮೂಲಸೌಕರ್ಯಗಳನ್ನು ಬಳಸಿಕೊಂಡು ಉನ್ನತ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು. 

ಸ್ಕ್ವೇ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಗಿರೀಶ್ ಕೆ.ಬಿ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಫಾರ್ಚೂನ್ ಪ್ರಮೋಟರ್ಸ್ ಮೂಡುಬಿದಿರೆ ಅಬ್ದುಲ್ ಆಲಾ ಪುತ್ತಿಗೆ ಮಾತನಾಡಿ ಕೇವಲ ಗೆಲುವಷ್ಟೇ ಅಲ್ಲದೆ, ಎದುರಾಳಿಗಳೊಂದಿಗೆ ಪ್ರೀತಿ ಮತ್ತು ಕ್ರೀಡಾಸ್ಫೂರ್ತಿಯಿಂದ ಸೆಣಸಾಡಿ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದರು.

ಗಿನ್ನೆಸ್ ದಾಖಲೆ ಪುರಸ್ಕೃತ ನದೀಮ್ ಅವರ ಸಂಘಟನೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 15 ಜಿಲ್ಲೆಗಳ ವಿಜೇತ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗಿರೀಶ್ ಜಿ.ವಿ., ನವೀನ್ ಮೈಸೂರ್, ದಿವ್ಯಾ ಹಾಗೂ ನದೀಮ್ ಅವರನ್ನು ಸನ್ಮಾನಿಸಲಾಯಿತು.

ನಿಟ್ಟೆ ಅರುಣ್ ಕುಮಾರ್, ಉಡುಪಿ ಜಿಲ್ಲೆಯ ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್ಣು, ವೈದ್ಯ ಇಬ್ರಾಹಿಂ ಖಲೀಲ್, ಮಾಡರ್ನ್ ಡೆವಲಪರ್, ರಿಯಲ್ ಎಸ್ಟೇಟ್, ಟ್ರೇಡಿಂಗ್ ಅಂಡ್ ಇನ್ವೆಸ್ಟ್‌ಮೆಂಟ್ ಮೂಡುಬಿದಿರೆ ಜಾವಿದ್ ಶೇಖ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಸದಸ್ಯ ರವಿ ಕೋಟ್ಯಾನ್, ಗಣ್ಯ ನಜೀರ್ ಯು. ಪಿ., ಪ್ರೆಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಸೀತಾರಾಮ ಆಚಾರ್ಯ, ಇಂಟರ್‌ನ್ಯಾಷನಲ್ ಸರ್ಟಿಫೈಡ್ ಟ್ರೈನರ್ ಮೂಡುಬಿದಿರೆ ಸ್ವಾಮಿಪ್ರಸಾದ್, ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಸಂಸ್ಥಾಪಕ ಸದಸ್ಯ ನಿಂಗರಾಜ್, ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಸಂಸ್ಥಾಪಕ ಸದಸ್ಯ ಸೈಯದ್ ಅಲಿ, ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷ (ಹಾಸನ ಜಿಲ್ಲೆ), ಮಂಜು ಡೈಮಂಡ್ ಮಾರ್ಷಲ್ ಆರ್ಟ್ಸ್ ಗದಗ ಹಾಗೂ ಸಂಸ್ಥೆಯ ಸಹ-ಕಾರ್ಯದರ್ಶಿ ಮಂಜುನಾಥ್, ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಸಹ-ಕಾರ್ಯದರ್ಶಿ (ಚಿಕ್ಕಬಳ್ಳಾಪುರ ಜಿಲ್ಲೆ) ನಾಸೀರುದ್ದೀನ್ ಪಿ. ಎ., ಮೈಸೂರು ಜಿಲ್ಲೆಯ ಏಕಲವ್ಯ ಪುರಸ್ಕೃತ ತರಬೇತುದಾರ ನವೀನ್, ಬೆಂಗಳೂರು ನಗರ ಜಿಲ್ಲೆಯ ಕಾರ್ಯದರ್ಶಿ ದಿವ್ಯಾ ಬಾಯಿ ಪಿ., ದಾವಣಗೆರೆ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಸದಸ್ಯೆ ಆಯಿಷಾ ತರೀನ್, ರಾಷ್ಟ್ರೀಯ ತೀರ್ಪುಗಾರ ಸೈಯದ್ ಶೋಯೆಬ್, ಅಂತರರಾಷ್ಟ್ರೀಯ ಕ್ರೀಡಾಪಟು ಹರ್ಷವರ್ಧನ್, ಮೈಸೂರು ಜಿಲ್ಲೆ ಸ್ಕ್ವಾಯ್ ಸಂಸ್ಥೆಯ ಕಾರ್ಯದರ್ಶಿ ಆಕಾಶ್ ಅರಸ್, ಗದಗ ಜಿಲ್ಲೆ ಸ್ಕ್ವಾಯ್ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ವರಿ ಭಜಂತ್ರಿ, ವಿಜಯನಗರ ಜಿಲ್ಲೆಯ ಕಾರ್ಯದರ್ಶಿ ಸವಿತಾ ಕಡಾಕೊಳ, ಸ್ಕ್ವೇ ಮಾರ್ಷಲ್ ಆರ್ಟ್ಸ್ ಆಫ್ ಕರ್ನಾಟಕದ ಜಂಟಿ ಕಾರ್ಯದರ್ಶಿ ಮೊಹಮ್ಮದ್ ನದೀಮ್, ದಕ್ಷಿಣ ಕನ್ನಡ ಜಿಲ್ಲಾ ಸ್ಕ್ವೇ ಅಸೋಸಿಯೇಷನ್ ಅಧ್ಯಕ್ಷ ಸಫ್ರಾಜ್ ಅಬ್ದುಲ್ ಖಾದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸೊಸೈಟಿಯ ನಿದೇ೯ಶಕ ಧನಂಜಯ ಮಟ್ಟು ಉಪಸ್ಥಿತರಿದ್ದರು.

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಹೊಂದಿರುವ ಸ್ಕ್ವೇ ಫೆಡರೇಷನ್ ಆಫ್ ಇಂಡಿಯಾ ಮತ್ತು ಇಂಟರ್‌ನ್ಯಾಷನಲ್ ಕೌನ್ಸಿಲ್ ಆಫ್ ಸ್ಕ್ವೇ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article