ಮೂಡುಬಿದಿರೆ ಸಮಾಜ ಮಂದಿರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
Saturday, August 15, 2026
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣಗೈದು ಮಾತನಾಡಿ ನಾವಿಂದು ಸ್ವಾಭಿಮಾನದಿಂದ ಬದುಕಲು, ಈ ದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಆಗಲು ಸ್ವಾತಂತ್ರ್ಯದ ಪರಿಕಲ್ಪನೆಯೇ ಕಾರಣ.
ಮೊದಲಿಗೆ ಅಮೇರಿಕಾ ಸ್ವಾತಂತ್ರ್ಯವನ್ನು ಪಡೆಯಿತು. ನಮ್ಮ ದೇಶದಲ್ಲಿ ಮಹಾತ್ಮಗಾಂಧಿ, ನೆಹರು, ವಲ್ಲಭಬಾಯಿ ಪಟೇಲ್ ಅವರು ಸುಶಿಕ್ಷಿತರಾಗಿದ್ದರಿಂದಲೇ ಅವರಲ್ಲಿ ದೇಶ ಅಭಿವೃದ್ಧಿ ಹೊಂದಬೇಕಾದರೆ ಸ್ವಾತಂತ್ರ್ಯ ಅಗತ್ಯ ಎಂಬ ಅರಿವು ಇದ್ದರಿಂದಲೇ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯವಾಯಿತು ಎಂದ ಅವರು ಸ್ವಾತಂತ್ರ್ಯ ಸಿಕ್ಕಿದ ನಂತರ ಮೊದಲ ಬಾರಿಗೆ ಸಮಾಜಮಂದಿರವು ಗೌರವಯುತವಾಗಿ ಧ್ವಜರೋಹಣವನ್ನು ಮಾಡಿದೆ ಎಂದರು.
ಚೌಟರ ಅರಮನೆಯ ಕುಲದೀಪ ಎಂ., ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮತ್ತು ಟ್ರಸ್ಟಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದಭ೯ದಲ್ಲಿ ಪಾಲ್ಗೊಂಡಿದ್ದರು.
ಸಮಾಜ ಮಂದಿರ ಸಭಾದ ಕಾಯ೯ದಶಿ೯ ಸುರೇಶ್ ಪ್ರಭು ಕಾಯ೯ಕ್ರಮ ನಿರೂಪಿಸಿದರು.