80ನೇ ಸ್ವಾತಂತ್ರ್ಯೋತ್ಸವ: ತ್ರಿವಣ೯ ಬಣ್ಣಗಳಿಂದ ದೀಪಾಲಂಕೃತಗೊಂಡು ಕಣ್ಮನ ಸೆಳೆದ ಮೂಡುಬಿದಿರೆಯ "ಸಾವಿರ ಕಂಬದ ಬಸದಿ"
Saturday, August 15, 2026
ಮೂಡುಬಿದಿರೆ: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯನ್ನು ಶನಿವಾರ ಸಂಜೆ ವಿಶೇಷ ತ್ರಿವಣ೯ ಬಣ್ಣಗಳಿಂದ "ವಿದ್ಯುತ್ ದೀಪಗಳಿಂದ ಅಲಂಕಾರ"ಗೊಳಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯಿತು.
ಜೈನ ಕಾಶಿ ಟ್ರಸ್ಟ್ (ರಿ)ನ ವತಿಯಿಂದ ಬಸದಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನೊಳಗೊಂಡ ದೀಪಗಳನ್ನು ಆಲಂಕಾರ ಮಾಡಲಾಗಿದ್ದು ಇದನ್ನು ವೀಕ್ಷಿಸಲು ಊರು ಹಾಗೂ ಇತರ ಊರುಗಳಿಂದ ಯಾತ್ರಿಕರು, ಭಕ್ತರು ಸಾವಿರಾರು ಮಂದಿ ಆಗಮಿಸಿ ವೈಭವವನ್ನು ಕಣ್ತುಂಬಿಕೊಂಡರು.
ಸಲಹಾ ಸಮಿತಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ದೀಪಾಲಂಕಾರಕ್ಕೆ ಚಾಲನೆ ನೀಡಿದರು.
ಜೈನ ಮಠದ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ, ಟ್ರಸ್ಟ್‌ನ ಪಟ್ಟಣಶೆಟ್ಟಿ ಸುದೇಶ್ ಕುಮಾರ್ , ಸುಧೀಶ್ ಕುಮಾರ್ ಹಾಗೂ ಚೌಟರ ಅರಮನೆ ಆದರ್ಶ್ ಶೇಖರ್, ಸದಸ್ಯ ಕೆ. ಕೃಷ್ಣ ರಾಜ್ ಹೆಗ್ಡೆ ಈ ಸಂದಭ೯ದಲ್ಲಿದ್ದರು.

