CEE–2026 ಪರೀಕ್ಷೆ: ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಅಖಿಲ ಭಾರತ ಮಟ್ಟದಲ್ಲಿ 25ನೇ ರ್‍ಯಾಂಕ್

CEE–2026 ಪರೀಕ್ಷೆ: ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಅಖಿಲ ಭಾರತ ಮಟ್ಟದಲ್ಲಿ 25ನೇ ರ್‍ಯಾಂಕ್


ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (NCERT) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CEE–2026)ಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಅಖಿಲ ಭಾರತ ಮಟ್ಟದಲ್ಲಿ 25ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ (RIE) ಸಂಸ್ಥೆಯ ಇಂಟಿಗ್ರೇಟೆಡ್ ಎಂಎಸ್ಸಿ ಎಡ್ (Integrated MScEd) ಕೋರ್ಸ್‌ ಪ್ರವೇಶಕ್ಕಾಗಿ ನಡೆದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೌಲ್ಯ ವೈ.ಆರ್. ಜೈನ್ ಈ ಸಾಧನೆ ಮಾಡಿದ್ದಾರೆ.

ನಿರಂತರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಪಡೆದಿರುವ ಮೌಲ್ಯ ವೈ.ಆರ್. ಜೈನ್ ಅವರ ಸಾಧನೆಗೆ ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ರಶ್ಮಿತಾ, ಭೋಧಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article