ಗ್ರಾ.ಪಂ. ಸಿಬ್ಬಂದಿಯಿಂದ ಮನೆ ತೆರಿಗೆ ಹಣ ದುರ್ಬಳಕೆ
Saturday, August 15, 2026
ಮಂಗಳೂರು: ಕಾರ್ಕಳ ಹೆಬ್ರಿ ಶಿವಪುರ ಗ್ರಾಮ ಪಂಚಾಯತ್ ಪಂಚಾಯತ್ ಬಿಲ್ ವಸೂಲಿಗಾರ ಮನೆ ತೆರಿಗೆಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿಯನ್ನು ದುರ್ಬಳಕೆ ಮಾಡಿ ಅವ್ಯವಹಾರ ಎಸಗಿರುವ ಘಟನೆ ನಡೆದಿದೆ.
ಶಿವಪುರ ಗ್ರಾಪಂನ ಬಿಲ್ ವಸೂಲಿಗಾರ ಮಂಜುನಾಥ(40) ಎಂಬಾತ 2023-24ನೇ ಸಾಲಿನಲ್ಲಿ 1,18,367 ರೂ. ಹಾಗೂ 2024-25ರಲ್ಲಿ 3,36,021 ರೂ. ಮನೆ ತೆರಿಗೆಯಲ್ಲಿ ವಸೂಲಾದ ಒಟ್ಟು 4,54,388 ರೂ. ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿವಪುರ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಶೋಕ್ ನೀಡಿರುವ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.