ಲಯನ್ಸ್ ಪಾರ್ಕ್: ಮೆಲ್ವಿನ್ ಜೋನ್ಸ್ ಪುತ್ಥಳಿ ಅನಾವರಣ

ಲಯನ್ಸ್ ಪಾರ್ಕ್: ಮೆಲ್ವಿನ್ ಜೋನ್ಸ್ ಪುತ್ಥಳಿ ಅನಾವರಣ


ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಇಲ್ಲಿನ ಲಯನ್ಸ್ ಪಾರ್ಕ್‌ನ ಹರಿಭವ ಸಭಾಭವನದ ಮುಂಭಾಗದಲ್ಲಿ ಸ್ಥಾಪಿಸಿರುವ ಅಂತರಾಷ್ಟ್ರೀಯ ಲಯನ್ಸ್ ಸ್ಥಾಪಕ ಲ. ಮೆಲ್ವಿನ್ ಜೋನ್ಸ್ ಅವರ ಪುತ್ಥಳಿಯನ್ನು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪೂರ್ವ ನಿರ್ದೇಶಕ ಲ. ಜೆ.ಪಿ. ಸಿಂಗ್ ಮತ್ತು ಲ. ಸಿಮ್ಮಿ ಸಿಂಗ್ ದಂಪತಿಗಳು ಶನಿವಾರ ಅನಾವರಣಗೊಳಿಸಿ ಶುಭಹಾರೈಸಿದರು.


ಲಯನ್ಸ್ ಜಿಲ್ಲೆ 317ಡಿಯ ನಿಕಟಪೂರ್ವ ರಾಜ್ಯಪಾಲ ಲ. ಕುಡ್ಪಿ ಅರವಿಂದ ಶೆಣೈ- ಮಮತಾ ಶೆಣೈ ದಂಪತಿಗಳು, ಪೂರ್ವ ರಾಜ್ಯಪಾಲರುಗಳಾದ ಕೆ. ಸಿ. ಪ್ರಭು, ರೊನಾಲ್ಡ್ ಗೋಮ್ಸ್, ಆಲ್ವಿನ್ ಪ್ಯಾಟ್ರಿಕ್ ಪತ್ರಾವೋ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ ಹೆಬ್ಬಾರ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ಕಾರ್ಯದರ್ಶಿ ಹರ್ಷ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಲಯನ್ಸ್ ಜಿಲ್ಲೆಯ ಪೂರ್ವ ಕ್ಯಾಬಿನೆಟ್ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ ಪಡಿಯಾರ್, ಪೂರ್ವ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮಾಜಿ ವಲಯಾಧ್ಯಕ್ಷರುಗಳಾದ ಆಲ್ವಿನ್ ಮಿನೇಜಸ್, ಮೆಲ್ವಿನ್ ಡಿಕೋಸ್ತ, ಜೊಸ್ಸಿ ಮಿನೇಜಸ್,  ಪ್ರತಿಭಾ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. 

ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಲಿಯೋ ಅನನ್ಯಾ ಶಶಾಂಕ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article