ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ವ್ಯಾಪ್ತಿಯ ಖಾಝಿಯಾಗಿ ಜಿಫ್ರಿ ತಿಂಙಳ್ ಅಧಿಕಾರ ಸ್ವೀಕಾರ
ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ದುವಾ ನೆರವೇರಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ವಿ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಫ್ರಿ ತಂಙಳ್ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.
ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಅವರು ಅನುಗ್ರಹ ಭಾಷಣ ಮಾಡಿದರು. ಅಬ್ದುಲ್ ಸತ್ತಾರ್ ಪಂದಲ್ಲೂರ್ ಅವರು ಮುಖ್ಯ ಪ್ರಭಾಷಣ ಮಾಡಿದರು.
ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ರಫೀಕ್ ಅಹ್ಮದ್ ಹುದವಿ ಕೋಲಾರ,ಅಮೀರ್ ತಂಙಳ್ ಕಿನ್ಯ,ಅಕ್ರಮ್ ಅಲೀ ತಂಙಳ್, ಮೂಡುಬಿದಿರೆ ಸಂಯುಕ್ತ ಜಮಾತ್ ಅಧ್ಯಕ್ಷ ಅಬ್ದುಲ್ ರಹ್ಮಾನ್ (ಅಬ್ಬುವಾಕ),ಹೆಚ್.ಎಂ.ಹಾಜಿ ಹಂಡೇಲ್, ಡಿ.ಎ.ಉಸ್ಮಾನ್ ತೋಡಾರ್, ಮೂಸಾ ದಾರಿಮಿ ತೋಡಾರ್, ಗಂಟಾಲ್ಕಟ್ಟೆ ಮಸೀದಿ ಕಮಿಟಿ ಅಧ್ಯಕ್ಷ ಹಮೀದ್, ರಝಾಕ್ ಸಚ್ಚರಿಪೇಟೆ ಮತ್ತಿತರ ಅನೇಕ ಧಾರ್ಮಿಕ ನೇತಾರರು, ವಿವಿಧ ಮಸೀದಿಗಳ ಅಧ್ಯಕ್ಷರು, ಖತೀಬರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ದಾರಿಮಿ ಅವರು ಸ್ವಾಗತಿಸಿ ಅಶ್ರಫ್ ಮರೋಡಿ ವಂದಿಸಿದರು. ಸಫ್ವಾನ್ ಬಾಖವಿ ಪೆರಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಫಿ ಕಿರೋಡಿ ಸಹಕರಿಸಿದರು.
